ಮನೆಯಲ್ಲಿಯೇ ಗೋಲ್ ಗಪ್ಪಾ ಮಾಡುವುದು ಹೇಗೆ

ಬೀದಿ ಬದಿಯಲ್ಲಿ ಮಾಡುವ ಗೋಲ್ ಗಪ್ಪಾ ಆರೋಗ್ಯದ ದೃಷ್ಟಿಯಿಂದ ತಿನ್ನಲು ಭಯವಿದ್ದರೆ ಮನೆಯಲ್ಲಿಯೇ ಮಾಡಿಕೊಂಡು ಸೇವನೆ ಮಾಡಬಹುದು. ಮಾಡುವುದು ಹೇಗೆ ನೋಡಿ.

Photo Credit: Instagram, Facebook

ಮೊದಲಿಗೆ ಕುಕ್ಕರ್ ನಲ್ಲಿ ಬಿಳಿ ಬಟಾಣಿ, ಆಲೂಗಡ್ಡೆ ಬೇಯಿಸಿಕೊಳ್ಳಿ

ಬೆಂದ ಬಟಾಣಿ, ಆಲೂಗಡ್ಡೆಯನ್ನು ಸ್ಮ್ಯಾಶ್ ಮಾಡಿ ಅದಕ್ಕೆ ಈರುಳ್ಳಿ, ಕೊತ್ತಂಬರಿ ಸೊಪ್ಪು ಸೇರಿಸಿಕೊಳ್ಳಿ

ಒಂದು ಬಟ್ಟಲು ರವೆಗೆ ಸ್ವಲ್ಪ ಸೋಡಾ ನೀರು ಹಾಕಿ ಕಲಸಿ ಎರಡು ಗಂಟೆ ಒದ್ದೆ ಬಟ್ಟೆ ಮುಚ್ಚಿಡಿ

ಬಳಿಕ ಇದನ್ನು ಸಣ್ಣ ಪೂರಿಗಳಂತೆ ಲಟ್ಟಿಸಿಕೊಂಡು ಎಣ್ಣೆಯಲ್ಲಿ ಕರಿದು ಪೂರಿ ಮಾಡಿಕೊಳ್ಳಿ

ಒಂದು ಮಿಕ್ಸಿಗೆ ಕೊತ್ತಂಬರಿ ಸೊಪ್ಪು, ಪುದೀನಾ, ಶುಂಠಿ ಹಾಕಿಕೊಂಡು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ

ಇದಕ್ಕೆ ಬೇಕಾದಷ್ಟು ನೀರು ಸೇರಿಸಿಕೊಂಡು ಜೀರಿಗೆ ಪೌಡರ್, ಚ್ಯಾಟ್ ಮಸಾಲ, ಇಂಗು ಸೇರಿಸಿಕೊಂಡು ಮಿಕ್ಸ್ ಮಾಡಿ

ಈಗ ಪೂರಿಗೆ ಆಲೂಗಡ್ಡೆ ಸ್ಟಫ್ ತುಂಬಿಸಿಕೊಂಡು ಮಾಡಿಟ್ಟ ಪಾನಿ ಸೇರಿಸಿಕೊಂಡು ತಿನ್ನಿ

ಫ್ರಿಡ್ಜ್ ನಲ್ಲಿಟ್ಟರೂ ರವೆ ಹಾಳಾಗುತ್ತಿದ್ದರೆ ಹೀಗೆ ಮಾಡಿ

Follow Us on :-