ಬೆಳ್ಳುಳ್ಳಿ ಚಟ್ನಿಪುಡಿ ಮಾಡುವ ವಿಧಾನ

ದೋಸೆ, ಇಡ್ಲಿಗೆ ಸೇರಿಸಿಕೊಂಡು ತಿನ್ನಲು ಬೆಳ್ಳುಳ್ಳಿ ಚಟ್ನಿಪುಡಿ ತುಂಬಾ ಟೇಸ್ಟಿಯಾಗಿರುತ್ತದೆ. ಇದನ್ನು ಮಾಡುವುದು ಹೇಗೆ ಇಲ್ಲಿದೆ ಸುಲಭ ವಿಧಾನ.

Photo Credit: Instagram

ಮೊದಲು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ

ಇದಕ್ಕೆ ಚಿಕ್ಕದಾಗಿ ಹೆಚ್ಚಿದ ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿ ತೆಗೆದಿಡಿ

ಇದೇ ಬಾಣಲೆಗೆ ಸ್ವಲ್ಪ ಉದ್ದಿನ ಬೇಳೆ, ಕೆಂಪು ಮೆಣಸು ಹಾಕಿ ಫ್ರೈ ಮಾಡಿ

ಇದು ಫ್ರೈ ಆಗುತ್ತಿರುವಾಗ ಸ್ವಲ್ಪ ಕರಿಬೇವು, ತುರಿದ ಕೊಬ್ಬರಿ ಹಾಕಿ

ಇವುಗಳನ್ನು ಚೆನ್ನಾಗಿ ಫ್ರೈ ಮಾಡಿದ ಬಳಿಕ ಎಲ್ಲವನ್ನೂ ಮಿಕ್ಸಿ ಜಾರಿಗೆ ಹಾಕಿ

ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸ್ವಲ್ಪ ಹುಣಸೆ ಹುಳಿ ಸೇರಿಸಿ ರುಬ್ಬಿಕೊಳ್ಳಿ

ನೀರು ಹಾಕದೇ ನುಣ್ಣಗೆ ರುಬ್ಬಿ ಪುಡಿ ಮಾಡಿಟ್ಟುಕೊಂಡರೆ ವಾರದವರೆಗೂ ಹಾಳಾಗಲ್ಲ

ತೆಳ್ಳಗಿದ್ದವರಿಗೆ ಕೊಲೆಸ್ಟ್ರಾಲ್ ಹೆಚ್ಚಾಗಲ್ವಾ

Follow Us on :-