ರೊಟ್ಟಿ, ಚಪಾತಿ ಮತ್ತು ಅನ್ನಕ್ಕೆ ಕಲಸಿಕೊಂಡು ತಿನ್ನಬಹುದಾದ ಬೆಳ್ಳುಳ್ಳಿ ಚಟ್ನಿ ಎಂದರೆ ಬಾಯಲ್ಲಿ ನೀರೂರುತ್ತದೆ ಅಲ್ಲವೇ? ಹಾಗಿದ್ದರೆ ಈವತ್ತು ಸುಲಭವಾಗಿ ಖಾರವಾದ ರುಚಿಕರ ಬೆಳ್ಳುಳ್ಳಿ ಚಟ್ನಿ ಮಾಡುವುದು ಹೇಗೆ ಎಂದು ನೋಡಿ.
Photo Credit: Instagram, AI image
ಮೊದಲಿಗೆ ಸ್ವಲ್ಪ ಬ್ಯಾಡಗಿ ಮೆಣಸಿನಕಾಯಿಯನ್ನು ನೀರಿನಲ್ಲಿ ಕೆಲವು ಸಮಯ ನೆನೆಸಿಡಿ
ಈಗ ಒಂದು ಮಿಕ್ಸಿ ಜಾರಿಗೆ ನೆನೆಸಿಟ್ಟ ಮೆಣಸು, ಬೆಳ್ಳುಳ್ಳಿ, ಶುಂಠಿ, ಜೀರಿಗೆ ಹಾಕಿ
ಇದಕ್ಕೆ ಕಾಲು ಚಮಚ ಸಕ್ಕರೆ, ಚ್ಯಾಟ್ ಮಸಾಲ ಹಾಗೂ ಉಪ್ಪು ಸೇರಿಸಿ
ಈಗ ಎಲ್ಲಾ ಮಿಶ್ರಣಕ್ಕೆ ಕಾಲು ಕಪ್ ನಷ್ಟು ನೀರು ಸೇರಿಸಿ ನುಣ್ಣಗೆ ರುಬ್ಬಿ
ಇದಕ್ಕೆ ಹುಳಿ ರುಚಿ ಸಿಗಲು ಮೇಲಿನಿಂದ ಸ್ವಲ್ಪ ನಿಂಬೆ ರಸವನ್ನು ಸೇರಿಸಿಕೊಳ್ಳಿ
ನಿಂಬೆ ರಸ ಬೇಡವೆಂದಿದ್ದರೆ ರುಬ್ಬುವಾಗ ಸ್ವಲ್ಪ ಹುಣಸೆ ಹುಳಿ ಸೇರಿಸಬಹುದು
ಈಗ ರುಚಿಕರ ಬೆಳ್ಳುಳ್ಳಿ ಖಾರದ ಚಟ್ನಿ ರೆಡಿಯಾಗಿದ್ದು, ಇದನ್ನು ರೋಟಿ, ಚಪಾತಿ, ಅನ್ನದ ಜೊತೆ ಸೇವಿಸಿ