ಖರ್ಚಿಲ್ಲದೇ ಟೆರೇಸ್ ಗಾರ್ಡನ್ ಮಾಡಲು ಟಿಪ್ಸ್

ಹೆಚ್ಚು ದುಡ್ಡು ಖರ್ಚು ಮಾಡದೇ ಮನೆಯಲ್ಲಿಯೇ ಇರುವ ವಸ್ತುಗಳನ್ನು ಬಳಕೆ ಮಾಡಿಕೊಂಡು ತಾರಸಿ ಕೃಷಿ ಮಾಡಬಹುದು. ಇದರಿಂದ ನೀವು ಎಸೆಯುವ ವಸ್ತುಗಳ ಪುನರ್ಬಳಕೆಯಾದಂತೂ ಆಗುತ್ತದೆ. ಅದಕ್ಕೆ ಇಲ್ಲಿದೆ ಟಿಪ್ಸ್.

Photo Credit: Instagram, AI image

ಟೆರೇಸ್ ಇಲ್ಲವೇ ನಿಮ್ಮ ಬಾಲ್ಕನಿಯಲ್ಲಿ ಸಾಕಷ್ಟು ಜಾಗವಿದ್ದರೂ ಗಿಡ ಮಾಡಬಹುದು

ಮನೆಗೆ ತಂದ ಅಗಲವಾದ ಪ್ಲಾಸ್ಟಿಕ್ ಬಾಟಲಿಯನ್ನು ಅಡ್ಡಲಾಗಿ ಕತ್ತರಿಸಿ ಅಲಂಕಾರಿಕ ಗಿಡ ನೆಡಬಹುದು

ತರಕಾರಿ ಸಿಪ್ಪೆ, ಚಹಾ ಪೌಡರ್ ನ್ನು ಸಂಗ್ರಹಿಸಿಟ್ಟು ಮಣ್ಣಿನಲ್ಲಿ ಕೊಳೆಯಿಸಿ ಗೊಬ್ಬರ ಮಾಡಬಹುದು

ಕಹಿಬೇವಿನ ಸೊಪ್ಪು, ಬೆಳ್ಳುಳ್ಳಿ ನೀರನ್ನು ಹುಳ ನಿವಾರಿಸಲು ಔಷಧಿಯಾಗಿ ಬಳಸಬಹುದು

ಟೊಮೆಟೊ, ಕೆಂಪು ಮೆಣಸಿನಕಾಯಿ, ಧನಿಯಾ ಕಾಳುಗಳನ್ನೇ ಬೀಜವಾಗಿ ಬಳಸಬಹುದು

ಪೈಂಟ್ ಡಬ್ಬಗಳು, ಒಡೆದ ಪ್ಲಾಸ್ಟಿಕ್ ಬಕೆಟ್ ಇದ್ದರೆ ಅದನ್ನೇ ಪಾಟ್ ಆಗಿ ಬಳಸಬಹುದು

ಅಡುಗೆ ಮನೆಯಲ್ಲಿ ಬಳಸಿ ಚೆಲ್ಲುವ ನೀರನ್ನೇ ಗಿಡಗಳಿಗೆ ಬಳಸಬಹುದು

ಹೋಟೆಲ್ ಶೈಲಿಯಲ್ಲಿ ಕ್ಯಾರೆಟ್, ಬೀನ್ಸ್ ಪಲ್ಯ

Follow Us on :-