ಎಗ್ ಮಸಾಲೆ ದೋಸೆ ತಿಂದಿದ್ದೀರಾ, ಒಮ್ಮೆ ಟ್ರೈ ಮಾಡಿ

ಮಸಾಲೆ ದೋಸೆ ಮಾಮೂಲಾಗಿ ಎಲ್ಲರೂ ಸೇವನೆ ಮಾಡಿರುತ್ತಾರೆ. ಅದಕ್ಕೆ ಮೊಟ್ಟೆ ಬಳಸಿ ಎಗ್ ಮಸಾಲೆ ದೋಸೆ ಟ್ರೈ ಮಾಡಿದ್ದೀರಾ? ಇಲ್ಲಿದೆ ನೋಡಿ ರೆಸಿಪಿ.

Photo Credit: Instagram

ಎರಡು ಮೊಟ್ಟೆ ಒಡೆದು ಒಳಗಿನ ಲೋಳೆಯನ್ನು ತೆಗೆದಿಟ್ಟುಕೊಳ್ಳಿ

ಈಗ ಇದಕ್ಕೆ ಸ್ವಲ್ಪ ಅರಿಶಿನ, ಕೊತ್ತಂಬರಿ ಸೊಪ್ಪು ಹಾಕಿ

ಬಳಿಕ ಚಿಕ್ಕದಾಗಿ ಹೆಚ್ಚಿದ ಹಸಿಮೆಣಸು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ

ಈಗ ತವಾ ಮೇಲೆ ಮಾಮೂಲು ದೋಸೆ ಹಿಟ್ಟಿನಿಂದ ದೋಸೆ ಮಾಡಿಕೊಳ್ಳಿ

ಇದರ ಮೇಲ್ಭಾಗಕ್ಕೆ ಮೊದಲು ಸ್ವಲ್ಪ ತುಪ್ಪ ಹಾಕಿ

ಬಳಿಕ ಮೊಟ್ಟೆಯ ಮಿಶ್ರಣವನ್ನು ಸುತ್ತಲೂ ಹಾಕಿ ಹರಡಿ

ಈಗ ದೋಸೆಯನ್ನು ಎರಡೂ ಬದಿ ಚೆನ್ನಾಗಿ ಬೇಯಿಸಿದರೆ ಎಗ್ ಮಸಾಲೆ ದೋಸೆ ರೆಡಿ

ಕೇರಳ ಸ್ಟೈಲ್ ಮೀನಿನ ತೊಕ್ಕು ರೆಸಿಪಿ

Follow Us on :-