ನುಗ್ಗೆಸೊಪ್ಪು ಆರೋಗ್ಯಕ್ಕೆ ಅತ್ಯುತ್ತಮವಾಗಿದೆ. ಇದನ್ನು ಬಳಸಿ ಸುಲಭವಾಗಿ ಒಂದು ದಾಲ್ ಮಾಡಬಹುದು. ಇದು ತಿನ್ನಲು ಬಹಳ ರುಚಿಕರ. ಬಿಸಿ ಅನ್ನದ ಜೊತೆ ತುಪ್ಪ ಮತ್ತು ದಾಲ್ ಹಾಕಿಕೊಂಡು ತಿನ್ನಬಹುದು. ನುಗ್ಗೆಸೊಪ್ಪಿನ ದಾಲ್ ಮಾಡುವ ವಿಧಾನ ಇಲ್ಲಿದೆ.
Photo Credit: Instagram, WD
ಎಳೆಯ ನುಗ್ಗೆ ಸೊಪ್ಪು ಮತ್ತು ಒಂದು ಕಪ್ ತೊಗರಿಬೇಳೆ ತೊಳೆದು ರೆಡಿ ಮಾಡಿಟ್ಟುಕೊಳ್ಳಿ
ಈಗ ಒಂದು ಕುಕ್ಕರ್ ನಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಜೀರಿಗೆ, ಮೆಣಸು ಒಗ್ಗರಣೆ ಕೊಡಿ
ಇದಕ್ಕೆ ಹಸಿಮೆಣಸಿನಕಾಯಿ, ಬೆಳ್ಳುಳ್ಳಿ, ಕರಿಬೇವು, ಶುಂಠಿ ಹಾಕಿ ಫ್ರೈ ಮಾಡಿಕೊಳ್ಳಿ
ಇದು ಫ್ರೈ ಆದ ಬಳಿಕ ಈರುಳ್ಳಿ, ಟೊಮೆಟೊ ಸೇರಿಸಿ ಕೊಂಚ ಅರಿಶಿನ ಪುಡಿ ಹಾಕಿ ಫ್ರೈ ಮಾಡಿ
ಇದು ಫ್ರೈ ಆದ ಬಳಿಕ ತೊಳೆದಿಟ್ಟಂತಹ ನುಗ್ಗೆ ಸೊಪ್ಪು ಸೇರಿಸಿ ಫ್ರೈ ಮಾಡಿ
ಇದಕ್ಕೆ ತೊಗರಿಬೇಳೆಯನ್ನು ಸೇರಿಸಿ ನೀರು ಹಾಕಿ ಕುಕ್ಕರ್ ನಲ್ಲಿ ಬೇಯಿಸಿ
ಬಳಿಕ ಇದನ್ನು ಹಿಚುಕಿ ಉಪ್ಪು ಹಾಕಿ ನೀರು ಹಾಕಿ ಕುದಿಸಿದರೆ ದಾಲ್ ರೆಡಿ