ಗಟ್ಟಿ ಮೊಸರು ಮಾಡುವುದು ಹೇಗೆ

ಮೊಸರು ಎಂದಾಕ್ಷಣ ಅದು ಗಟ್ಟಿಯಾಗಿ, ಹುಳಿಯಿರದೇ ಐಸ್ ಕ್ರೀಂನಂತಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಆದರೆ ಹೋಟೆಲ್ ನಲ್ಲಿ ಸಿಗುವ ಹಾಗೆ ನಮಗೆ ಗಟ್ಟಿ ಮೊಸರು ಮಾಡುವುದು ಹೇಗೆ ಎಂದು ತಿಳಿಯಬೇಕೇ? ಇಲ್ಲಿ ನೋಡಿ.

Photo Credit: Instagram, AI image

ಗಟ್ಟಿ ಮೊಸರು ಮಾಡಲು ಅರ್ಧ ಲೀಟರ್ ಪಾಶ್ಚರೀಕರಿಸಿದ ಹಾಲು ಮತ್ತು 2-3 ಸ್ಪೂನ್ ಮೊಸರು ಬೇಕು

ಈ ಹಾಲನ್ನು ಒಂದು ಪಾತ್ರೆಯಲ್ಲಿ ನೀರು ಹಾಕದೇ ಕೆಲವು ನಿಮಿಷ ಚೆನ್ನಾಗಿ ಕುದಿಯಲು ಬಿಡಿ

ಬಳಿಕ ಇದನ್ನು ಒಂದು ಅಗಲ ಪಾತ್ರೆಯಲ್ಲಿ ಬಿಸಿ ಆರಲು ಬಿಡಿ

ಇದು ಬಿಸಿ ತಣಿದಾಗ ಎರಡರಿಂದ ಮೂರು ಸ್ಪೂನ್ ನಷ್ಟು ಮೊಸರು ಸೇರಿಸಿಕೊಳ್ಳಿ

ಬಳಿಕ ಇದನ್ನು ಎರಡು ಪಾತ್ರೆ ಬಳಸಿಕೊಂಡು ಅತ್ತಿತ್ತ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ

ಈಗ ಮೊಸರು ಮಾಡುವ ಪಾತ್ರೆಯಲ್ಲಿ ಹಾಕಿ ಇದನ್ನು ಮುಚ್ಚಳ ಮುಚ್ಚಿ ಇಟ್ಟುಕೊಳ್ಳಿ

ಬಳಿಕ ಇದನ್ನು ಸುಮಾರು 8 ರಿಂದ 10 ಗಂಟೆಗಳ ಕಾಲ ಬಿಟ್ಟರೆ ಗಟ್ಟಿ ಮೊಸರು ರೆಡಿಯಾಗುತ್ತದೆ

ಅಡುಗೆ ಮನೆ ಟೈಲ್ಸ್ ನಲ್ಲಿ ಜಿಡ್ಡು ಕ್ಲೀನ್ ಮಾಡಲು ಟಿಪ್ಸ್

Follow Us on :-