ಮಕ್ಕಳ ಫೇವರಿಟ್ ಕೋಕನಟ್ ಚಾಕ್ಲೇಟ್ ಮನೆಯಲ್ಲೇ ಮಾಡಿ

ತೆಂಗಿನ ಕಾಯಿ ಬಳಸಿ ಮನೆಯಲ್ಲಿಯೇ ಸೂಪರ್ ಆಗಿ ಚಾಕಲೇಟ್ ಮಾಡಬಹುದು. ಇದನ್ನು ಮಕ್ಕಳೂ ಇಷ್ಟಪಡುತ್ತಾರೆ. ಕೋಕನಟ್ ಚಾಕಲೇಟ್ ಮಾಡುವುದು ಹೇಗೆ ನೋಡಿ.

Photo Credit: Instagram

ಮೊದಲು ತೆಂಗಿನ ಕಾಯಿ ಹೋಳುಗಳನ್ನು ತೆಗೆದುಕೊಳ್ಳಿ

ಇದರ ಹಿಂದಿನ ಕಂದು ಬಣ್ಣದ ಸಿಪ್ಪೆ ತೆಗೆದು ಚಿಕ್ಕದಾಗಿ ಕತ್ತರಿಸಿ

ಇವುಗಳನ್ನು ಮಿಕ್ಸಿ ಜಾರ್ ಗೆ ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ

ಈಗ ಇದನ್ನು ಬಾಣಲೆಗೆ ಹಾಕಿ ಸ್ವಲ್ಪ ಸಕ್ಕರೆ ಹಾಕಿ ಬಿಸಿ ಮಾಡಿ

ಬಳಿಕ ಇದಕ್ಕೆ ಹಾಲು ಸೇರಿಸಿ ಚೆನ್ನಾಗಿ ತಿರುವಿ ಹಿಟ್ಟುಗಟ್ಟಿ ಮಾಡಿ

ಬಳಿಕ ಉರಿ ಆರಿಸಿ ತಣಿದ ಬಳಿಕ ಚಿಕ್ಕ ಚಾಕಲೇಟ್ ಆಕಾರ ಮಾಡಿ

ಇದನ್ನು ಚಾಕಲೇಟ್ ಸಿರಪ್ ನಲ್ಲಿ ಮುಳುಗಿಸಿ ಆರಲು ಬಿಟ್ಟರೆ ಚಾಕಲೇಟ್ ರೆಡಿ

ಕರಿದ ತಿಂಡಿ ಮಾಡಿದ ಬಳಿಕ ಎಣ್ಣೆ ಕ್ಲೀನಿಂಗ್ ಮಾಡಲು ಟಿಪ್ಸ್

Follow Us on :-