ಈರುಳ್ಳಿ ಹಾಕದೇ ಮಾಡುವ ಚಿತ್ರಾನ್ನ ರೆಸಿಪಿ

ಚಿತ್ರಾನ್ನ ಮಾಡುವಾಗ ಸಾಮಾನ್ಯವಾಗಿ ಈರುಳ್ಳಿ ಹಾಕಲಾಗುತ್ತದೆ. ಆದರೆ ಈ ರೀತಿ ಚಿತ್ರಾನ್ನ ಮಾಡಿದರೆ ಈರುಳ್ಳಿ, ಬೆಳ್ಳುಳ್ಳಿ ಯಾವುದೂ ಬೇಕಾಗಿಲ್ಲ.

Photo Credit: Instagram

1 ಕಪ್ ಅಕ್ಕಿ ತೆಗೆದುಕೊಂಡು 2 ಕಪ್ ನೀರು ಹಾಕಿ ಕುಕ್ಕರ್ ನಲ್ಲಿ ಬೇಯಿಸಿ

ಮಿಕ್ಸಿ ಜಾರಿಗೆ ಸ್ವಲ್ಪ ಕಾಯಿತುರಿ, ಸಾಸಿವೆ, ಒಣಮೆಣಸು ಹಾಕಿ ನೀರು ಹಾಕದೇ ರುಬ್ಬಿ

ಈಗ ಒಂದು ಬಾಣಲೆಗೆ ಎಣ್ಣೆ ಹಾಕಿ ನೆಲಗಡಲೆ ಹಾಕಿ ಫ್ರೈ ಮಾಡಿ ಪಕ್ಕಕ್ಕಿಡಿ

ಅದೇ ಬಾಣಲೆಗೆ ಸಾಸಿವೆ, ಉದ್ದಿನ ಬೇಳೆ, ಒಣಮೆಣಸು ಹಾಕಿ ಫ್ರೈ ಮಾಡಿ

ಇದು ಫ್ರೈ ಆದ ಬಳಿಕ ಕರಿಬೇವು ಹಾಕಿ, ಹುರಿದ ನೆಲಗಡಲೆಯನ್ನೂ ಸೇರಿಸಿ

ಈಗ ಇದಕ್ಕೆ ಸ್ವಲ್ಪ ಅರಿಶಿನ ಹಾಕಿ, ಬಳಿಕ ರುಬ್ಬಿದ ಮಸಾಲೆಯನ್ನು ಸೇರಿಸಿ

ಇವೆರಡೂ ಚೆನ್ನಾಗಿ ಫ್ರೈ ಆದ ಬಳಿಕ ಅನ್ನ, ಉಪ್ಪು, ನಿಂಬೆ ರಸ ಹಾಕಿ ಮಿಕ್ಸ್ ಮಾಡಿ

ಔಟ್ ಲೆಟ್ ಪೈಪ್ ನಲ್ಲಿರುವ ಬ್ಲಾಕ್ ಸರಿಪಡಿಸಲು ಟಿಪ್ಸ್

Follow Us on :-