ಪೂರಿಗೆ ಬೆಸ್ಟ್ ಕಾಂಬಿನೇಷನ್ ಬಾಂಬೆ ಸಾಗು ಮಾಡುವ ವಿಧಾನ

ಪೂರಿ, ಚಪಾತಿಗೆ ಬೆಸ್ಟ್ ಕಾಂಬಿನೇಷನ್ ಆಗಿರುವ ಬಾಂಬೆ ಸಾಗು ಸುಲಭವಾಗಿ ಮಾಡುವುದು ಹೇಗೆ ಮತ್ತು ಏನೆಲ್ಲಾ ಸಾಮಗ್ರಿಗಳು ಬೇಕು ಎನ್ನುವ ವಿವರ ಇಲ್ಲಿದೆ ನೋಡಿ.

Photo Credit: Instagram

ಮೊದಲು ಎರಡು ಆಲೂಗಡ್ಡೆಯನ್ನು ಬೇಯಿಸಿ ಸಿಪ್ಪೆ ತೆಗೆದು ಸ್ಮ್ಯಾಶ್ ಮಾಡಿಟ್ಟುಕೊಳ್ಳಿ

ಈಗ ಈರುಳ್ಳಿ, ಹಸಿಮೆಣಸಿನಕಾಯಿ ಎರಡು ಕತ್ತರಿಸಿಟ್ಟುಕೊಳ್ಳಿ

ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ಬಳಿಕ ಜೀರಿಗೆ, ಕಡಲೆಬೇಳೆ, ಕರಿಬೇವು ಹಾಕಿ ಒಗ್ಗರಣೆ ಕೊಡಿ

ಈಗ ಇದಕ್ಕೆ ಕತ್ತರಿಸಿಟ್ಟುಕೊಂಡ ಹಸಿಮೆಣಸು ಮತ್ತು ಈರುಳ್ಳಿ , ಟೊಮೆಟೊ ಸೇರಿಸಿ ಫ್ರೈ ಮಾಡಿ

ಫ್ರೈ ಮಾಡುವಾಗ ಸ್ವಲ್ಪ ಅರಿಶಿನ, ಸ್ವಲ್ಪ ಉಪ್ಪು ಸೇರಿಸಿಕೊಂಡು ಫ್ರೈ ಮಾಡಿ

ಇದು ಬೆಂದ ಬಳಿಕ ಸ್ಮ್ಯಾಶ್ ಮಾಡಿಟ್ಟುಕೊಂಡ ಆಲೂಗಡ್ಡೆ ಸೇರಿಸಿ ಕೊಂಚ ನೀರು ಹಾಕಿ

ಇದು ಒಂದು ಕುದಿ ಬರುತ್ತಿರುವಾಗ ಎರಡು ಸ್ಪೂನ್ ಕಡಲೆ ಹಿಟ್ಟನ್ನು ನೀರು ಮಾಡಿ ಸೇರಿಸಿ

ಹೊಸ ಒಳ ಉಡುಪು ಧರಿಸುವ ಮೊದಲು ಹೀಗೆ ಮಾಡಲೇಬೇಕು

Follow Us on :-