ಬಾಳೆಕಾಯಿ ದೋಸೆ, ಪಲ್ಯ, ಸಾಂಬಾರ್ ನಂತೇ ದಿಡೀರ್ ಆಗಿ ರುಚಿಕರ ಬಾಳೆಕಾಯಿ ರೊಟ್ಟಿಯನ್ನೂ ಮಾಡಬಹುದು. ಇದನ್ನು ಮಾಡಲು ಯಾವೆಲ್ಲಾ ಸಾಮಗ್ರಿಗಳು ಬೇಕು ಮತ್ತು ಹೇಗೆ ಮಾಡುವುದು ಎಂದು ಇಲ್ಲಿದೆ ವಿವರ.
Photo Credit: Instagram, WD
ಮೊದಲಿಗೆ ಒಂದು ಕಪ್ ಅಕ್ಕಿ ಹಿಟ್ಟು, ಕಾಲು ಕಪ್ ರವೆ, ಅರ್ಧ ಕಪ್ ಮೊಸರು ತೆಗೆದುಕೊಳ್ಳಿ
ಇವಿಷ್ಟನ್ನೂ ಕಲಸಿಕೊಂಡು ಹದ ನೋಡಿಕೊಂಡು ಸ್ವಲ್ಪ ಬಿಸಿ ನೀರನ್ನು ಹಾಕಿ ಗಟ್ಟಿಯಾಗಿ ಕಲಸಿಕೊಳ್ಳಿ
10 ನಿಮಿಷಗಳ ಕಾಲ ಇದನ್ನು ಒಂದು ಪಾತ್ರೆಯಲ್ಲಿ ಮುಚ್ಚಳ ಮುಚ್ಚಿ ಹಾಗೇ ಬಿಡಿ
ಬಳಿಕ ಇದಕ್ಕೆ ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ, ಕರಿಬೇವು, ಹಸಿಮೆಣಸು ಹಾಕಿಕೊಂಡು ಕಲಸಿ
ಈಗ ಇದಕ್ಕೆ ಉಪ್ಪು ಮತ್ತು ಸ್ವಲ್ಪ ತೆಂಗಿನ ತುರಿ ಸೇರಿಸಿಕೊಂಡು ಮತ್ತಷ್ಟು ಕಲಸಿ
ಈಗ ಬಾಳೆಕಾಯಿಯನ್ನು ಚಿಕ್ಕದಾಗಿ ಕತ್ತರಿಸಿ ಮಿಕ್ಸಿಯಲ್ಲಿ ಹಾಕಿ ತರಿ ತರಿಯಾಗಿ ರುಬ್ಬಿ
ಈಗ ಇದನ್ನು ರೊಟ್ಟಿಹಿಟ್ಟಿಗೆ ಸೇರಿಸಿಕೊಂಡು ತಟ್ಟಿ ಬೇಯಿಸಿದರೆ ರುಚಿಯಾದ ಬಾಳೆಕಾಯಿ ರೊಟ್ಟಿ ರೆಡಿ