ಬಾಚಣಿಗೆ ಕ್ಲೀನ್ ಮಾಡಲು ಟಿಪ್ಸ್

ಪ್ರತಿನಿತ್ಯ ತಲೆ ಬಾಚುವ ಬಾಚಣಿಗೆಯನ್ನು ಆಗಾಗ ತೊಳೆಯುತ್ತಿರಬೇಕು. ಇಲ್ಲದೇ ಹೋದರೆ ಸೋಂಕು ತಗುಲಿ ತಲೆಹೊಟ್ಟಿನಂತಹ ಸಮಸ್ಯೆ ಬರಬಹುದು. ಹಾಗಿದ್ದರೆ ಬಾಚಣಿಗೆ ಕ್ಲೀನ ಮಾಡಲು ಸುಲಭ ಉಪಾಯವೇನಿದೆ ಇಲ್ಲಿ ನೋಡಿ.

Photo Credit: Instagram, AI image

ಬಾಚಣಿಗೆಯಲ್ಲಿ ಎಣ್ಣೆಯ ಜಿಡ್ಡು, ಹೊಟ್ಟು, ಕೊಳೆ ಸೇರಿಕೊಂಡು ಕೊಳಕಾಗುತ್ತದೆ

ಕೇವಲ ಕೊಳಕಾಗಿ ಕಾಣುವುದು ಮಾತ್ರವಲ್ಲ, ಇದರಿಂದ ಸೋಂಕು ಕೂಡಾ ಹರಡಬಹುದು

ಬಾಚಣಿಗೆ ಕ್ಲೀನ್ ಮಾಡಲು ಮುಖ್ಯವಾಗಿ ಸೋಪ್ ನೀರು, ಟೂತ್ ಬ್ರಷ್, ವಿನೇಗರ್ ಬೇಕು

ಮೊದಲಿಗೆ ಸ್ವಲ್ಪ ಸೋಪ್ ವಾಟರ್ ಮಾಡಿಕೊಂಡು ಅದಕ್ಕೆ ವಿನೇಗರ್ ಡ್ರಾಪ್ ಹಾಕಿಕೊಳ್ಳಿ

ಈ ದ್ರಾವಣದಲ್ಲಿ 10 ನಿಮಿಷ ಕೊಳೆಯಾಗಿರುವ ಬಾಚಣಿಗೆಯನ್ನು ನೆನೆಸಿಡಿ

ಬಳಿಕ ಅದನ್ನು ಹೊರತೆಗೆದು ಒಂದು ಟೂತ್ ಬ್ರಷ್ ನಿಂದ ಚೆನ್ನಾಗಿ ಬ್ರಷ್ ಮಾಡಿ

ಆಗ ಅದರಲ್ಲಿರುವ ಕೊಳೆ ಜೊತೆಗೆ ಸೂಕ್ಷ್ಮ ವೈರಾಣುಗಳೂ ನಾಶವಾಗುತ್ತದೆ

ರುಚಿಯಾದ ಬೆಳ್ಳುಳ್ಳಿ ಉಪ್ಪಿನಕಾಯಿ ರೆಸಿಪಿ

Follow Us on :-