ಅವರೆಕಾಳು ಮಿಕ್ಸ್ಚರ್ ಮಾಡುವ ವಿಧಾನ

ಸಂಜೆ ಚಹಾ ಜೊತೆ ಆರೋಗ್ಯಕರವಾದ ಸ್ನ್ಯಾಕ್ಸ್ ಬೇಕು ಎಂದರೆ ಅವರೆಕಾಳು ಮಿಕ್ಸ್ಚರ್ ಸೂಪರ್ ಕಾಂಬಿನೇಷನ್. ಇದನ್ನು ಸಿಂಪಲ್ ಆಗಿ ಮಾಡುವ ವಿಧಾನ ಇಲ್ಲಿದೆ.

Photo Credit: Instagram

ಅವರೆಕಾಳನ್ನು ಹಿಚುಕಿ ಚೆನ್ನಾಗಿ ತೊಳೆದು ನೀರು ಬಸಿದಿಟ್ಟುಕೊಳ್ಳಿ

ಈಗ ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ

ಇದಕ್ಕೆ ಅವರೆಕಾಳನ್ನು ಹಾಕಿ ಮಧ್ಯಮ ಉರಿಯಲ್ಲಿ ಫ್ರೈ ಮಾಡಿ

ಇದೇ ಎಣ್ಣೆಗೆ ಸ್ವಲ್ಪ ನೆಲಗಡಲೆ ಹಾಕಿ ಫ್ರೈ ಮಾಡಿ

ಈಗ ಸ್ವಲ್ಪ ಗೋಡಂಬಿ, ಒಣಕೊಬ್ಬರಿ, ಕರಿಬೇವನ್ನೂ ಇದೇ ರೀತಿ ಫ್ರೈ ಮಾಡಿ

ಎಲ್ಲವನ್ನೂ ಒಂದು ಅಗಲವಾದ ಪಾತ್ರೆಗೆ ಹಾಕಿ ಮಿಕ್ಸ್ ಮಾಡಿ

ಈಗ ಇದಕ್ಕೆ ಸ್ವಲ್ಪ ಉಪ್ಪು, ಖಾರದ ಪುಡಿ, ಅರಿಶಿನ ಹಾಕಿದರೆ ಮಿಕ್ಸ್ಚರ್ ರೆಡಿ

ದೇಹ ತಂಪಾಗಿಸುವ ರಾಗಿ ಹಾಲು ರೆಸಿಪಿ

Follow Us on :-