ಆಂಧ್ರ ಸ್ಟೈಲ್ ನಲ್ಲಿ ನಿಂಬೆಹಣ್ಣಿನ ಉಪ್ಪಿನಕಾಯಿ ರೆಸಿಪಿ

ಆಂಧ್ರ ಸ್ಟೈಲ್ ನಲ್ಲಿ ನಿಂಬೆ ಹಣ್ಣಿನ ಉಪ್ಪಿನಕಾಯಿ ಎಂದರೆ ನಿಮಗೆ ಇಷ್ಟವೇ? ಇದನ್ನು ಸುಲಭವಾಗಿ ಮಾಡುವುದು ಹೇಗೆ ಎಂದು ಇಲ್ಲಿದೆ ನೋಡಿ ರೆಸಿಪಿ.

Photo Credit: Instagram

ಚೆನ್ನಾಗಿರುವ ನಿಂಬೆ ಹಣ್ಣನ್ನು ಚೆನ್ನಾಗಿ ತೊಳೆದು ನೀರಿನಂಶವಿಲ್ಲದಂತೆ ಒರೆಸಿಟ್ಟುಕೊಳ್ಳಿ

ನಿಂಬೆ ಹಣ್ಣಿನಿಂದ ಬೀಜ ತೆಗೆದು ನಾಲ್ಕು ಹೋಳುಗಳಾಗಿ ಮಾಡಿಟ್ಟುಕೊಳ್ಳಿ

ಇದಕ್ಕೆ ಉಪ್ಪು, ಖಾರದ ಪುಡಿ ಹಾಕಿ ಚೆನ್ನಾಗಿ ಕಲಸಿಕೊಂಡು 5 ದಿನಗಳವರೆಗೆ ಉಪ್ಪು ಹೀರಲು ಬಿಡಿ

ಈಗ ಉಪ್ಪಿನಲ್ಲಿ ಹಾಕಿಟ್ಟ ನಿಂಬೆಹಣ್ಣಿನ ಹೋಳನ್ನು ಹಿಂಡಿ ರಸ ತೆಗೆದು ಮತ್ತೆ ಅದಕ್ಕೇ ಹೋಳು ಹಾಕಿಡಿ

ಒಂದು ತವಾದಲ್ಲಿ ಸಾಸಿವೆ, ಮೆಂತ್ಯೆಯನ್ನು ಎಣ್ಣೆ ಹಾಕದೇ ಫ್ರೈ ಮಾಡಿ ಪುಡಿ ಮಾಡಿ

ಪ್ಯಾನ್ ಗೆ ಎಣ್ಣೆ ಹಾಕಿ ಇಂಗು ಹುರಿದು ಅದಕ್ಕೆ 50 ಗ್ರಾಂ ಖಾರದ ಪುಡಿ ಹಾಕಿ ಚೆನ್ನಾಗಿ ಬೆರೆಸಿ

ಎಣ್ಣೆಯಲ್ಲಿ ಫ್ರೈ ಆದ ಖಾರದ ಪುಡಿ ಪೇಸ್ಟ್ ನ್ನು ನಿಂಬೆ ಹೋಳಿಗೆ ಮಿಕ್ಸ್ ಮಾಡಿದರೆ ಉಪ್ಪಿನಕಾಯಿ ರೆಡಿ

ಸೀಬೆಕಾಯಿಯನ್ನು ಹೀಗೆ ತಿಂದರೆ ಸೂಕ್ತ

Follow Us on :-