ಕೇಶರಾಶಿ ಕಾಪಾಡುವುದು ಹೇಗೆ? ಮನೆಯಲ್ಲಿಯೇ ಇದೆ ಮನೆಮದ್ದು

ಒಬ್ಬ ವ್ಯಕ್ತಿಯ ಅಂದವನ್ನು ಕೇವಲ ಆತನ ಮುಖ ಮತ್ತು ಕಣ್ಣುಗಳು ಹೆಚ್ಚಿಸುತ್ತವೆ ಎಂದರೆ ಅದು ತಪ್ಪಾಗುತ್ತದೆ. ತಲೆಯ ಸುಂದರ ಕೇಶರಾಶಿ ಯಾವುದೇ ಒಬ್ಬ ವ್ಯಕ್ತಿ ಅಥವಾ ಮಹಿಳೆಯ ಸೌಂದರ್ಯವನ್ನು ದುಪ್ಪಟ್ಟು ಮಾಡುತ್ತದೆ.ಕೂದಲು ಉದುರುವುದು, ಅರ್ಧಕ್ಕೆ ಮುರಿದುಕೊಳ್ಳುವುದು, ಕೂದಲು ಬೆಳ್ಳಗಾಗುವುದು ಇತ್ಯಾದಿಗಳು ಕೂದಲಿನ ಸಮಸ್ಯೆಗಳಾಗಿ ಕಾಡಲು ಶುರುವಾಗುತ್ತವೆ. ಆದ್ದರಿಂದ ಕೂದಲಿನ ಆರೈಕೆ ಅತಿ ಮುಖ್ಯ. ಪ್ರತಿ ರಾತ್ರಿ ಐದು ನಿಮಿಷಗಳ ಕಾಲ ಇದಕ್ಕಾಗಿ ಮೀಸಲಿಡಿ.

photo credit social media

ತಲೆ ಸ್ನಾನ ಮಾಡಿದ ನಂತರ ಯಾವುದೇ ಕಾರಣಕ್ಕೂ ತೇವಾಂಶ ಇರುವ ಕೂದಲನ್ನು ಬಾಚಣಿಗೆಯಿಂದ ಬಾಚಬೇಡಿ. ಕೂದಲು ಒಣಗಿದ ನಂತರವಷ್ಟೇ ತಲೆಗೆ ಎಣ್ಣೆ ಹಾಕಿ.

ನಿಮ್ಮ ಬಳಿ ತೆಂಗಿನ ಎಣ್ಣೆ, ಕೊಬ್ಬರಿ ಎಣ್ಣೆ, ಬಾದಾಮಿ ಎಣ್ಣೆ ಅಥವಾ ಆಲಿವ್ ಆಯಿಲ್ ಇದ್ದರೆ ಅದರಿಂದ ಐದು ನಿಮಿಷಗಳ ಕಾಲ ಕೂದಲನ್ನು ಚೆನ್ನಾಗಿ ಮಸಾಜ್ ಮಾಡಿ. ಏಕೆಂದರೆ ಆಗಾಗ ಆಯಿಲ್ ಮಸಾಜ್ ಮಾಡುವುದರಿಂದ ಕೂದಲು ಆರೋಗ್ಯಕರವಾಗಿ, ಸೊಂಪಾಗಿ ಬೆಳೆದು ಹೊಳಪಿನಿಂದ ಕೂಡಿರುತ್ತದೆ.

ರಾತ್ರಿ ಮಲಗುವ ಸಮಯದಲ್ಲಿ ಎಣ್ಣೆಯಿಂದ ಕೂದಲನ್ನು ಮಸಾಜ್ ಮಾಡುವುದರಿಂದ ಇಡೀ ದಿನ ಉಂಟಾದ ಮಾನಸಿಕ ಒತ್ತಡವನ್ನು ನಿವಾರಣೆ ಮಾಡಿಕೊಳ್ಳಬಹುದು.

ಹೊರಗಿನ ವಾತಾವರಣ, ಪ್ರದೂಷಣೆಗಳಿಂದಾಗಿ ಕೂದಲಿನ ಆರೋಗ್ಯ ಕಾಪಾಡಿಕೊಳ್ಳಲು ಸಾಕಷ್ಟು ಹೆಣಗಾಡಬೇಕಾಗಬಹುದು. ಸಾಮಾನ್ಯವಾಗಿ ಹೆಣ್ಣಾಗಲಿ, ಗಂಡಾಗಲಿ ಕೂದಲಿನ ಮೇಲೆ ಅತಿ ಹೆಚ್ಚು ಪ್ರೀತಿಯನ್ನು ಹೊಂದಿರುತ್ತಾರೆ. ತಮಗೆ ಬೇಕಾದ ರೀತಿಯಲ್ಲಿ ಹೇರ್ ಕಟ್‌ ಅಥವಾ ಹೇರ್ ಸ್ಟೈಲ್ ಮಾಡಿಸಿಕೊಳ್ಳಬೇಕು ಎಂದು ಬಯಸುವುದು ಸರ್ವೇ ಸಾಮಾನ್ಯ.

ಇತ್ತೀಚೆಗಂತೂ ಕೂದಲಿಗೆ ವಿಧ ವಿಧವಾದ ಕಲರಿಂಗ್‌, ಸ್ಟ್ರೈಟ್‌ನಿಂಗ್‌, ರಾಸಾಯನಿಕಗಳಿಂದ ತುಂಬಿರುವ ಶಾಂಪೂಗಳನ್ನು ಬಳಸುವುದರ ಮೂಲಕ ಕೂದಲಿನ ಬುಡವನ್ನು ಬಲಹೀನವಾಗಿಸುತ್ತಿದ್ದೇವೆ.

ಕೇವಲ ಮಾಲಿನ್ಯ ಮತ್ತು ಅನಾರೋಗ್ಯಕರವಾದ ಜೀವನಶೈಲಿಯಿಂದ ಮಾತ್ರವಲ್ಲದೆ, ಒತ್ತಡದಿಂದ ಕೂಡ ಕೂದಲು ಉದುರುವುದು, ಬೋಳು ತಲೆ ಉಂಟಾಗುವುದು, ತಲೆ ಹೊಟ್ಟು ಸೇರಿದಂತೆ ಅನೇಕ ತೊಂದರೆಗಳನ್ನು ಹೊಂದಬಹುದು.

ಸುಂದರವಾದ ಕೇಶ ಸೌಂದರ್ಯ ಪಡೆಯಲು ಕೇವಲ ರಾಸಾಯನಿಕ ಶಾಂಪೂ, ಮಾರುಕ್ಟಟೆಯಲ್ಲಿ ದೊರೆಯುವ ದುಬಾರಿ ಉತ್ಪನ್ನಗಳನ್ನು ಬಳಸುವುದು ಮಾತ್ರವಲ್ಲ, ಬದಲಾಗಿ ದೇಹದ ಒಳಗಿನಿಂದ ಪೋಷಿಸುವ ಆರೋಗ್ಯಕರವಾದ ಆಹಾರವನ್ನು ಸೇವನೆ ಮಾಡುವುದು ಕೂಡ ಅಷ್ಟೇ ಮುಖ್ಯ.

ದೇಹದ ತೂಕ ಕಡಿಮೆಯಾಗಲು ವ್ಯಾಯಾಮ, ಯೋಗಾಭ್ಯಾಸ

Follow Us on :-