ದೇಹದ ತೂಕ ಕಡಿಮೆಯಾಗಲು ವ್ಯಾಯಾಮ, ಯೋಗಾಭ್ಯಾಸ

ದೇಹದ ತೂಕ ಹೆಚ್ಚಿಸಿಕೊಂಡವರು ಹೇಗಾದರೂ ಮಾಡಿ, ತಮ್ಮ ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದು ಪ್ರತಿದಿನ ಬೆಳಗ್ಗೆ ಬೇಗನೇ ಎದ್ದು ವಾಕಿಂಗ್ ಅಥವಾ ಜಾಗಿಂಗ್ ಮಾಡುವುದು, ವ್ಯಾಯಾಮ ಮಾಡುವುದು, ಎಣ್ಣೆ ಪದಾರ್ಥಗಳು ಇರುವ ಆಹಾರಗಳಿಂದ ದೂರವಿದ್ದು, ಆಯ್ದ ಆಹಾರಗಳನ್ನು ಮಾತ್ರ ಸೇವನೆ ಮಾಡುವರು, ಹೀಗೆ ಪ್ರತಿದಿನ ತೂಕ ಇಳಿಸಿಕೊಳ್ಳಲು ಬೇಕಾಗುವ ಎಲ್ಲಾ ಪ್ರಯತ್ನವನ್ನು ಕೂಡ ಮಾಡುವರು ಆದರೆ, ದೇಹದ ತೂಕವನ್ನು, ಮಾತ್ರ ಇಳಿಸಿಕೊಳ್ಳಲು ಆಗದೇ ನಿರಾಸೆ ಪಡುವರು!

photo credit social media

ಮೊದಲಿಗೆ ದೇಹದ ತೂಕ ಇಳಿಸಿಕೊಳ್ಳಲು ಬಯಸುವ ವರು, ತಮ್ಮ ಆಹಾರ ಪದಾರ್ಥಗಳ ಬಗ್ಗೆ ಹೆಚ್ಚಿನ ಗಮನ ವಹಿಸಬೇಕು. ಯಾಕೆಂದ್ರೆ ನಾವು ಸೇವನೆ ಮಾಡುವ ಎಲ್ಲಾ ಬಗೆಯ ಆಹಾರ ಗಳು ಕೂಡ, ನಮ್ಮ ದೇಹದ ತೂಕ ಇಳಿಸಲು ನೆರವಿಗೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ!

ಕೆಲವೊಂದು ಆಹಾರ ಪದಾರ್ಥಗಳಿಂದಾಗಿ, ದೇಹಕ್ಕೆ ಕ್ಯಾಲೋರಿ ಅಂಶಗಳು ಹೆಚ್ಚಾಗಿ ಸಿಗುವುದರಿಂದ, ಕ್ರಮೇ ಣವಾಗಿ ನಮ್ಮ ದೇಹದ ತೂಕ ಕೂಡ ಹೆಚ್ಚಾಗುತ್ತಾ ಹೋಗುತ್ತದೆ. ಮೊದಲಿಗೆ ದೇಹದ ತೂಕ ಇಳಿಸಿಕೊಳ್ಳಲು ಬಯಸು ವವರು, ಕಡಿಮೆ ಪ್ರಮಾಣದ ಕ್ಯಾಲೋರಿ ಇರುವ ಆಹಾರ ಗಳ ಜೊತೆಗೆ ಬೊಜ್ಜು ಹಾಗೂ ಕೊಲೆಸ್ಟ್ರಾಲ್ ಕರಗಿಸುವ ಆಹಾರಗಳನ್ನು ಸೇವನೆ ಮಾಡುವುದರಿಂದ, ಈಸಿಯಾಗಿ ದೇಹದ ತೂಕ ಇಳಿಸಿ ಕೊಳ್ಳಬಹುದು!

ನಾರಿನಾಂಶವು ಹೆಚ್ಚಿರುವ ಆಹಾರ ಪದಾರ್ಥಗಳ ಹಾಗೂ ಹಣ್ಣುಗಳನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ, ಹೊಟ್ಟೆ ತುಂಬಿದಂತೆ ಅನುಭವ ವಾಗುವುದು ಹಾಗೂ ಅತಿ ಯಾಗಿ ತಿನ್ನುವುದನ್ನು ಇದು ತಪ್ಪಿಸುತ್ತದೆ.

ಹೀಗಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ನಾರಿ ನಾಂಶ ಹೆಚ್ಚಿರುವಆಹಾರ ಗಳನ್ನು ಇಲ್ಲಾಂದ್ರೆ ಹಣ್ಣು ಗಳನ್ನು ಸೇವನೆ ಮಾಡುವ ಅಭ್ಯಾಸ ಮಾಡಿ ಕೊಳ್ಳಬೇಕು. ಉದಾಹರಣೆಗೆ ಕಿತ್ತಳೆ, ಸೇಬೆ, ಬಾಳೆಹಣ್ಣು, ಪಿಯರ್ಸ್ ಇಂತಹ ಹಣ್ಣುಗಳನ್ನು ದೈನಂದಿನ ಆಹಾರ ಪದ್ಧತಿ ಯಲ್ಲಿ ಸೇರಿಸಿಕೊಳ್ಳಿ.​

ಇನ್ನು ರಾತ್ರಿಯ ಊಟಕ್ಕೆ ನಾರಿನಾಂಶ ಹೆಚ್ಚಿರುವ ತರಕಾರಿಗಳನ್ನು ಸೇವನೆ ಮಾಡಿ. ಉದಾಹರಣೆಗೆ ಬೀನ್ಸ್, ಕ್ಯಾರೆಟ್, ಹಸಿರು ಬಟಾಣಿ ಇತ್ಯಾದಿಗಳನ್ನು ಸೇವನೆ ಮಾಡಿ. ಯಾಕೆಂದ್ರೆ ಇಂತಹ ನಾರಿನಾಂಶ ಇರುವ ಆಹಾರಗಳು, ಮೆಟಬಾಲಿಸಂ ಪ್ರಕ್ರಿಯೆಯನ್ನು ಹೆಚ್ಚಿಸಿ, ದೀರ್ಘಕಾಲ ದವರೆಗೆ ಹೊಟ್ಟೆ ಹಸಿವು ಆಗದಂತೆ ನೋಡಿಕೊಳ್ಳುತ್ತದೆ, ಅಲ್ಲದೆ ಅತಿಯಾಗಿ ತಿನ್ನುವ ಬಯಕೆ ನಿಯಂತ್ರಣಕ್ಕೆ ಬರುತ್ತದೆ.​

ಗಜ ಗಾತ್ರ ಹೊಂದಿರುವ ಹೂಕೋಸಿನಲ್ಲಿ ಕ್ಯಾಲೋರಿ ಅಂಶಗಳು ತುಂಬಾನೇ ಕಡಿಮ ಪ್ರಮಾಣದಲ್ಲಿ ಕಂಡು ಬರುತ್ತದೆ. ಒಂದು ಕಪ್ ಹೂಕೋಸಿನಲ್ಲಿ ಸುಮಾರು 24 ಕ್ಯಾಲರಿಗಳನ್ನು ಮಾತ್ರ ಕಂಡು ಬರುವುದು. ಹೀಗಾಗಿ ವಾರದಲ್ಲಿ ಒಂದೆರಡು ಬಾರಿಯಾ ದರೂ ಹೂಕೋಸು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಂಡರೆ ಒಳ್ಳೆಯದು.

ಮೆಂತೆಸೊಪ್ಪು ಕಹಿ ಗುಣ ಹೊಂದಿದ್ದರೂ, ಕೂಡ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಒಳಗೊಂಡಿ ರುವ ತರಕಾರಿ. ಪ್ರಮುಖವಾಗಿ ತನ್ನಲ್ಲಿ ಕಡಿಮೆ ಪ್ರಮಾಣ ದಲ್ಲಿ ಕ್ಯಾಲೋರಿ ಅಂಶಗಳು ಕಂಡು ಬರುತ್ತದೆ.

ಕಿವಿ ಹಣ್ಣಿನಲ್ಲಿರುವ ಆರೋಗ್ಯಕಾರಿ ಗುಣಗಳು ಅಪಾರ

Follow Us on :-