ಫ್ರಿಡ್ಜ್ ಇಲ್ಲದೇ ಇದ್ದರೂ ಸಾಂಬಾರ್ ಹಾಳಾಗದಂತೆ ಇಡಲು ಟಿಪ್ಸ್
ರಾತ್ರಿ ಮಾಡಿದ ಸಾಂಬಾರ್ ಮಿಕ್ಕಿದೆ ಎಂದರೆ ಅದನ್ನು ಮರುದಿನವೂ ಬಳಸುವವರೇ ಹೆಚ್ಚು. ಕೆಲವರಿಗೆ ಫ್ರಿಡ್ಜ್ ನಲ್ಲಿಟ್ಟು ಬಳಸುವುದು ಇಷ್ಟವರಿಲ್ಲ. ಹಾಗಿರುವಾಗ ಫ್ರಿಡ್ಜ್ ಇಲ್ಲದೆಯೂ ಸಾಂಬಾರ್ ಹಾಳಾಗದಂತೆ ಇಡಲು ಏನು ಮಾಡಬಹುದು ನೋಡಿ.
Photo Credit: Instagram
ಸಾಂಬಾರ್ ನ್ನು ಸೂಕ್ತವಾಗಿ ಸಂರಕ್ಷಿಸಿಟ್ಟರೆ ಎರಡು ದಿನಗಳವರೆಗೂ ಬಳಸುವುದಕ್ಕೆ ತೊಂದರೆಯಿಲ್ಲ
ರಾತ್ರಿ ಸಾಂಬಾರ್ ಉಳಿದರೆ ಮಲಗುವ ಮುನ್ನ ಅದನ್ನು ಒಮ್ಮೆ ಮಧ್ಯಮ ಉರಿಯಲ್ಲಿ ಚೆನ್ನಾಗಿ ಕುದಿಸಿ
ಮಿಕ್ಕಿದ ಸಾಂಬಾರ್ ಬಿಸಿಯಾಗಿರುವಾಗ ಅದನ್ನು ಪ್ಲಾಸ್ಟಿಕ್ ಪಾತ್ರೆಯಲ್ಲಿ ಹಾಕಿಡಬೇಡಿ
ಸಾಂಬಾರ್ ಕುದಿಸಿದ ತಕ್ಷಣ ಅದನ್ನು ಏರ್ ಟೈಟ್ ಆಗಿ ಮುಚ್ಚಿಡಲು ಹೋಗಬೇಡಿ
ಶೇಖರಿಸುವ ಮುನ್ನ ಸಾಂಬಾರ್ ಬಿಸಿ ಸಂಪೂರ್ಣ ಆರಿಸಿಯೇ ಮುಚ್ಚಳ ಮುಚ್ಚಿಡಿ
ಒಂದು ಬಟ್ಟಲಿನಲ್ಲಿ ನೀರು ಹಾಕಿ ಅದರ ಮೇಲೆ ಸಾಂಬಾರ್ ಪಾತ್ರೆಯನ್ನು ಇಟ್ಟು ಶೇಖರಿಸಿಡಬಹುದು
ಮರು ಬಳಕೆ ಮಾಡುವ ಮುನ್ನ ಸಾಂಬಾರ್ ನ್ನು ಇನ್ನೊಮ್ಮೆ ಚೆನ್ನಾಗಿ ಕುದಿಸಿ ಬಳಸಿದರೆ ಉತ್ತಮ