ಬಿಳಿ ರಕ್ತಕಣ ಹೆಚ್ಚಾಗಬೇಕಾದರೆ ಹೀಗೆ ಮಾಡಿ

ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಬೇಕಾದರೆ ಬಿಳಿ ರಕ್ತಕಣಗಳ ಸಂಖ್ಯೆ ಹೆಚ್ಚಾಗಬೇಕು. ಇವುಗಳು ದೇಹದ ವೀರ ಯೋಧರಂತೆ ಕೆಲಸ ಮಾಡುತ್ತವೆ. ಹಾಗಿದ್ದರೆ ಬಿಳಿ ರಕ್ತಕಣ ಹೆಚ್ಚಾಗಬೇಕಾದರೆ ಯಾವ ಆಹಾರ ಸೇವಿಸಬೇಕು ನೋಡೋಣ.

credit: social media

ಕೆಂಪುರಕ್ತಕಣ ಜೀವನಾಡಿಯಾಗಿದ್ದರೆ ಬಿಳಿ ರಕ್ತಕಣ ದೇಹವನ್ನು ರೋಗಗಳಿಂದ ಸಂರಕ್ಷಿಸುವ ಯೋಧನಾಗಿರುತ್ತದೆ.

ಹರಳೆಣ್ಣೆಯಲ್ಲಿ ಬಿಳಿ ರಕ್ತಕಣವನ್ನು ಹೆಚ್ಚಿಸುವ ಸಾಮರ್ಥ್ಯ ಹೊಂದಿದ್ದು, ಇದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ವಿಟಮಿನ್ ಸಿ ಅಂಶ ಹೆಚ್ಚಿರುವ ಲವಂಗ ಬಿಳಿ ರಕ್ತಕಣಗಳ ಸಂಖ್ಯೆ ಹೆಚ್ಚಿಸಿ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ವಿಟಮಿನ್ ಸಿ ಅಂಶ ಹೆಚ್ಚಿರುವ ಕಿತ್ತಳೆ, ನಿಂಬೆ, ಮೂಸಂಬಿ, ಸ್ಟ್ರಾಬೆರಿ, ಪಪ್ಪಾಯ ಹಣ್ಣುಗಳನ್ನು ಸೇವಿಸಿ

ನಮ್ಮ ದೈನಂದಿನ ಅಡುಗೆಯಲ್ಲಿ ಶುಂಠಿ, ಅರಶಿಣವನ್ನು ಹೆಚ್ಚು ಪ್ರಮಾಣದಲ್ಲಿ ಬಳಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಪಪ್ಪಾಯಿ ಎಲೆಗೆ ಜೇನು ತುಪ್ಪ ಬೆರೆಸಿ ಸೇವಿಸುವುದರಿಂದ ಬಿಳಿ ರಕ್ತಕಣಗಳ ಸಂಖ್ಯೆ ಅಟೋಮ್ಯಾಟಿಕ್ ಆಗಿ ಹೆಚ್ಚುತ್ತದೆ.

ಇಲ್ಲದೇ ಹೋದಲ್ಲಿ ಪಪ್ಪಾಯ ಎಲೆಯನ್ನು ಅರೆದು ಜ್ಯೂಸ್ ಮಾಡಿ ಕುಡಿದರೂ ಬಿಳಿ ರಕ್ತಕಣಗಳ ಸಂಖ್ಯೆ ಹೆಚ್ಚಿಸಬಹುದು.

ವಾಲ್ ನಟ್ ನೆನೆಸಿ ಸೇವಿಸುವುದರ ಉಪಯೋಗಗಳು

Follow Us on :-