ಪಿರಿಯಡ್ ಸಮಯದಲ್ಲಿ ನೋವು ಕಡಿಮೆಯಾಗಲು ಇಲ್ಲಿದೆ ಸರಳ ಉಪಾಯ

ಮಹಿಳೆಯರಿಗೆ ಪ್ರತಿ ತಿಂಗಳು ಮುಟ್ಟಿನ ಸಮಸ್ಯೆಯಿಂದ ನೋವು ಹಾಗೂ ಸಂಕಟಗಳು ಕಾಡುವುದು ಸಾಮಾನ್ಯ. ಮುಟ್ಟಿನ ಸಂದರ್ಭದಲ್ಲಿ ಗರ್ಭಾಶಯದ ಸ್ನಾಯುಗಳು ಸಂಕುಚಿತಗೊಂಡು, ಅಂತರ್ನಿರ್ಮಿತ ಒಳಪದರಗಳನ್ನು ಹೊರಹಾಕುವ ಕಾರ್ಯದಲ್ಲಿ ತೊಡಗಿಕೊಂಡಿರುತ್ತದೆ. ಅಂತಹ ಸಂದರ್ಭದಲ್ಲಿ ಸ್ನಾಯುಗಳು ತೀವ್ರವಾದ ಸೆಳೆತ ಮತ್ತು ನೋವಿಗೆ ಒಳಗಾಗುತ್ತದೆ.

photo credit social media

ಮಹಿಳೆಯರಿಗೆ ಪ್ರತಿ ತಿಂಗಳು ಮುಟ್ಟಿನ ಸಮಸ್ಯೆಯಿಂದ ನೋವು ಹಾಗೂ ಸಂಕಟಗಳು ಕಾಡುವುದು ಸಾಮಾನ್ಯ. ಮುಟ್ಟಿನ ಸಂದರ್ಭದಲ್ಲಿ ಗರ್ಭಾಶಯದ ಸ್ನಾಯುಗಳು ಸಂಕುಚಿತಗೊಂಡು, ಅಂತರ್ನಿರ್ಮಿತ ಒಳಪದರಗಳನ್ನು ಹೊರಹಾಕುವ ಕಾರ್ಯದಲ್ಲಿ ತೊಡಗಿಕೊಂಡಿರುತ್ತದೆ.

ಸ್ನಾಯುಗಳು ತೀವ್ರವಾದ ಸೆಳೆತ ಮತ್ತು ನೋವಿಗೆ ಒಳಗಾಗುತ್ತದೆ. ಕೆಲವರು ಋತುಚಕ್ರದ ಸಂದರ್ಭದಲ್ಲಿ ವಾಕರಿಕೆ, ಅತಿಸಾರ, ತಲೆನೋವು ಮತ್ತು ಬೆನ್ನು ನೋವಿನಂತಹ ಸಮಸ್ಯೆಗಳಿಂದ ಜರ್ಜರಿತರಾಗುತ್ತಾರೆ. ಇಂತಹ ಸಮಸ್ಯೆಗಳು ಕಾಣಿಸಿಕೊಂಡಾಗ ಯಾವ ರೀತಿಯ ಮನೆ ಪರಿಹಾರಗಳನ್ನು ಮಾಡಬಹುದು? ಅವು ಹೇಗೆ ಪರಿಣಾಮಕಾರಿಯಾದ ವಿಶ್ರಾಂತಿಯನ್ನು ನೀಡುತ್ತವೆ? ಎನ್ನುವುದನ್ನು ನಿಮಗಾಗಿ ಈ ಮುಂದೆ ವಿವರಿಸಲಾಗಿದೆ

ಮಹಿಳೆಯರಲ್ಲಿ ಋತುಸ್ರಾವದ ಸಮಯದಲ್ಲಿ ಹೊಟ್ಟೆ ನೋವು ಕಾಣಿಸಿಕೊಳ್ಳುವುದು ಹೆಚ್ಚು. ಅಧಿಕ ರಕ್ತ ಸ್ರಾವ ಉಂಟಾಗುವುದರಿಂದ, ಗರ್ಭದ ಮೇಲೆ ಹಾರ್ಮೋನ್‍ಗಳ ಪ್ರಭಾವ ಉಂಟಾಗುವುದರಿಂದಲೂ ಸಾಕಷ್ಟು ನೋವು ಹಾಗೂ ಆರೋಗ್ಯದಲ್ಲಿ ಬದಲಾವಣೆ ಉಂಟಾಗುತ್ತವೆ.

ಆಪಲ್ ಸೈಡರ್ ವಿನೆಗರ್ ಅದ್ಭುತ ಔಷಧೀಯ ಗುಣಗಳನ್ನು ಒಳೊಂಡಿದೆ. ಇದರ ಸೇವನೆಯಿಂದ ಹೊಟ್ಟೆ ನೋವು, ಹೊಟ್ಟೆ ಉಬ್ಬರ, ಸೆಳೆತ, ತಲೆ ನೋವು, ಕಿರಿಕಿರಿ, ಆಯಾಸ ಸೇರಿದಂತೆ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಮುಟ್ಟಿನ ಸಮಯದಲ್ಲಿ ಕಾಣಿಸಿಕೊಳ್ಳುವ ಅಸ್ವಸ್ಥತೆಗಳನ್ನು ನಿವಾರಿಸಲು ಉತ್ಯುತ್ತಮ ರೀತಿಯಲ್ಲಿ ಸಹಾಯ ಮಾಡುವುದು.

ಶುಂಠಿ ಮತ್ತು ಜೇನುತುಪ್ಪ ಅತ್ಯುತ್ತಮವಾದ ಔಷಧೀಯ ವಸ್ತುಗಳು. ಇವುಗಳನ್ನು ಆಯುರ್ವೇದ ಚಿಕಿತ್ಸಾ ಕ್ರಮದಲ್ಲಿ ಹಾಗೂ ಮನೆ ಮದ್ದಿನಲ್ಲಿ ಅಧಿಕವಾಗಿ ಬಳಸುತ್ತಾರೆ. ಶುಂಠಿ ಮತ್ತು ಜೇನು ಮಿಶ್ರಿತ ಚಹಾ ಸೇವನೆಯ ಮೂಲಕ ಸ್ನಾಯು ಸೆಳೆತ, ಆಂತರಿಕ ಕಿರಿಕಿರಿ ಹಾಗೂ ಮಾನಸಿಕ ಒತ್ತಡಗಳನ್ನು ಸುಲಭವಾಗಿ ತಡೆಯಬಹುದು.

ಒಂದು ಕಪ್ ಶುಂಠಿ ಮತ್ತು ಜೆನುತುಪ್ಪ ಮಿಶ್ರಿತ ಚಹಾ ಸೇವಿಸಿದರೆ ಕ್ಯಾಮೊಮೈಲ್ ವಾಕರಿಕೆ ಮತ್ತು ಉಬ್ಬುವಿಕೆಯನ್ನು ತಡೆಯಬಹುದು. ಜೊತೆಗೆ ಜೀರ್ಣ ಕ್ರಿಯೆಯನ್ನು ಸುಧಾರಿಸಿಕೊಳ್ಳಬಹುದು.

ಬಾಳೆಹಣ್ಣು ಎಲ್ಲರ ಕೈಗೆಟಕುವ ದರದಲ್ಲಿ ಸಿಗುವ ಸಾಮಾನ್ಯವಾದ ಹಣ್ಣು. ವರ್ಷದ ಎಲ್ಲಾ ದಿನಗಳಲ್ಲೂ ದೊರೆಯುವ ಈ ಹಣ್ಣು ವಿಟಮಿನ್ ಬಿ6, ಮೆಗ್ನೀಸಿಯಂ ಮತ್ತು ಮ್ಯಾಗ್ನೀಷಿಯನ್‍ಗಳಿಂದ ಸಮೃದ್ಧವಾಗಿರುತ್ತವೆ. ಈ ಆರೋಗ್ಯಕಾರಿ ಗುಣಗಳು ಹೊಂದಿರುವ ಹಣ್ಣನ್ನು ಮುಟ್ಟಿನ ಸಮಯದಲ್ಲಿ ಕಾಡುವ ನೋವು ಹಾಗೂ ಅಸ್ವಸ್ಥತೆಯನ್ನು ನಿವಾರಿಸಲು ಸವಿಯಬಹುದು.

ಮುಟ್ಟಿನ ಸಮಯದಲ್ಲಿ ಅಥವಾ ನಿತ್ಯವೂ ನಿಗದಿತ ಸಮಯದಲ್ಲಿ ಬಾಳೆ ಹಣ್ಣನ್ನು ಸವಿಯುವುದರಿಂದ ದೇಹವು ಆರೋಗ್ಯಕರವಾಗಿರುತ್ತದೆ. ಜೊತೆಗೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಸುಲಭವಾಗಿ ನಿಯಂತ್ರಿಸಬಹುದು.

ಉಸಿರಾಟದ ಸಮಸ್ಯೆ ದೂರವಾಗಿಸಲು ಯೋಗಾಸನ ತುಂಬಾ ಪ್ರಯೋಜನಾಕಾರಿ

Follow Us on :-