ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸುವುದು ಹೇಗೆ ಗೊತ್ತಾ?

ಮಧುಮೇಹ ಒಂದು ಬಗೆಯ ದೀರ್ಘ ಕಾಲ ಕಾಡುವ ಕಾಯಿಲೆ. ಈ ಕಾಯಿಲೆ ಒಮ್ಮೆ ನಮ್ಮನ್ನು ಆವರಿಸಿಬಿಟ್ಟರೆ ಅಷ್ಟೇ, ಆಮೇಲೆ ಇದರಿಂದ ಬಚಾವಾಗಿ ಹೊರಗೆ ಬರುವುದು ಅಷ್ಟು ಸುಲಭದ ಮಾತಲ್ಲ! ಒಮ್ಮೆ ಈ ಕಾಯಿಲೆ ಬಂದು ಬಿಟ್ಟಿತು ಎಂದರೆ ಇಡೀ ಜೀವನ ಪರ್ಯಂತ ಇದರಿಂದ ತೊಂದರೆಗಳು ಗ್ಯಾರಂಟಿ! ನಿಜ ಹೇಳಬೇಕು, ಎಂದರೆ ಈ ಕಾಯಿಲೆ ಬರುವ ಮುಂಚೆಯೇ, ಸರಿಯಾದ ಜೀವನಶೈಲಿ ಹಾಗೂ ಆಹಾರ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಇದರ ವಕ್ರ ದೃಷ್ಟಿಯಿಂದ ಪಾರಾಗಬಹುದು.

photo credit social media

ಇದಕ್ಕಾಗಿ ಸರಿಯಾದ ಆಹಾರಪದ್ಧತಿ ಸೇವನೆಯ ಜೊತೆಗೆ, ಎಣ್ಣೆ ಪದಾರ್ಥಗಳು, ಉಪ್ಪು ಹಾಗೂ ಸಕ್ಕರೆ ಅಂಶ ಹೆಚ್ಚಿರುವ ಆಹಾರ ಪದಾರ್ಥಗಳಿಂದ ದೂರವಿರಬೇಕು. ದಿನನಿತ್ಯ ಸರಿಯಾಗಿ ವ್ಯಾಯಾಮಗಳನ್ನು ಮಾಡಿಕೊಳ್ಳುವುದರ ಜೊತೆಗೆ ದೇಹದಲ್ಲಿ ಕಂಡುಬರುವ ಗ್ಲುಕೋಸ್ ಮತ್ತು ಸಕ್ಕರೆ ಅಂಶವನ್ನು ನಿಯಂತ್ರಣಕ್ಕೆ ತಂದುಕೊಳ್ಳುವುದರ ಕಡೆಗೆ ಹೆಚ್ಚಿನ ಗಮನ ಕೊಡಬೇಕು.

ಮನುಷ್ಯನಿಗೆ ಕಣ್ಣುಗಳು ಎಷ್ಟು ಮುಖ್ಯ ಎಂಬುದು ನಮಗೆಲ್ಲಾ ಗೊತ್ತೇ ಇದೆ. ಒಂದು ವೇಳೆ ಜೀವನದಲ್ಲಿ ನಮಗೆ ಎಲ್ಲಾ ಇದ್ದು, ಕಣ್ಣುಗಳೇ ಇಲ್ಲದೇ ಹೋಗಿದ್ದರೆ, ನಮ್ಮ ಸ್ಥಿತಿ ಹೇಗಿರುತ್ತಿತ್ತು ಎಂದು ನೀವೇ ಒಮ್ಮೆ ಯೋಚಿಸಿ ನೋಡಿ? ಹೀಗಾಗಿ ದೇವರು ಕೊಟ್ಟಿರುವ ಕಣ್ಣುಗಳ ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲಿದೆ

ಒಂದು ವೇಳೆ ದೇಹದ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುತ್ತಾ ಹೋಗುವ ಜನರಿಗೆ, ಆರೋಗ್ಯದಲ್ಲಿ ಏರುಪೇರಾಗಲು ಶುರುವಾಗುತ್ತದೆ! ಕೆಲವರಿಗೆ ಕಣ್ಣುಗಳ ಭಾಗದಲ್ಲಿ ಕೂಡ ಸಮಸ್ಯೆಗಳು ಕಾಣಿಸಲು ಶುರುವಾಗುತ್ತದೆ.

ಅಜೀರ್ಣ ಸಮಸ್ಯೆಯನ್ನು ನಿವಾರಣೆ ಮಾಡುವುದು ಹೇಗೆ: ಇಲ್ಲಿವೆ ಸರಳ ಟಿಪ್ಸ್

Follow Us on :-