ಅಜೀರ್ಣ ಸಮಸ್ಯೆಯನ್ನು ನಿವಾರಣೆ ಮಡುವುದು ಹೇಗೆ: ಇಲ್ಲಿವೆ ಸರಳ ಟಿಪ್ಸ್

ಹೊಟ್ಟೆಯಲ್ಲಿ ಅಜೀರ್ಣ ಸಮಸ್ಯೆಯು ಇದ್ದರೆ ಅದು ದೈನಂದಿನ ಕೆಲಸ ಕಾರ್ಯಗಳ ಮೇಲೆ ಕೂಡ ಪರಿಣಾಮ ಬೀರುವುದು. ಸೇವನೆ ಮಾಡಿದಂತಹ ಆಹಾರವು ಸರಿಯಾಗಿ ಜೀರ್ಣವಾಗದೆ ಇದ್ದರೆ ಅದರಿಂದ ಅಜೀರ್ಣ ಸಮಸ್ಯೆಯು ಕಾಡುವುದು. ಅಜೀರ್ಣ ಸಮಸ್ಯೆಯಿಂದಾಗಿ ಗ್ಯಾಸ್, ಅಸಿಡಿಟಿ, ಹೊಟ್ಟೆ ಉಬ್ಬರ ಇತ್ಯಾದಿ ಸಮಸ್ಯೆಗಳು ಕಂಡುಬರುವುದು.

photo credit social media

ಅಜೀರ್ಣ ಸಮಸ್ಯೆ ನಿವಾರಣೆಗೆ ಇಂದು ಹಲವಾರು ರೀತಿಯ ಔಷಧಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಕೆಲವೊಂದು ಮನೆಮದ್ದುಗಳು ಕೂಡ ಅಜೀರ್ಣ ಸಮಸ್ಯೆ ನಿವಾರಣೆ ಮಾಡುವುದು. ಇಂತಹ ಕೆಲವು ಮನೆಮದ್ದುಗಳ ಬಗ್ಗೆ ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ. ಅದನ್ನು ನೀವು ಬಳಸಿಕೊಂಡು ಅಜೀರ್ಣ ಸಮಸ್ಯೆಯನ್ನು ದೂರ ಓಡಿಸಬಹುದು.

ಒಂದು ಲೋಟ ಬಿಸಿ ನೀರಿಗೆ 5 ಗ್ರಾಂನಷ್ಟು ಇಂಗು ಹಾಕಿ. ಇದಕ್ಕೆ ಒಂದು ಚಮಚ ಸಕ್ಕರೆ ಹಾಕಿಕೊಂಡರೆ ರುಚಿಯು ಚೆನ್ನಾಗಿರುವುದು. ಇದರ ಘಾಟು ವಾಸನೆ ಕುಡಿಯುವ ವೇಳೆ ತೊಂದರೆ ನೀಡಬಹುದು. ಆದರೆ ಇದು ವಾಯು ಮತ್ತು ಅಜೀರ್ಣ ಸಮಸ್ಯೆ ದೂರ ಮಾಡುವುದು.

20-25 ಕರಿಬೇವಿನ ಎಲೆಗಳನ್ನು ತಣ್ಣೀರಿನಲ್ಲಿ ತೊಳೆಯಿರಿ. ಇದರ ಬಳಿಕ ಇದನ್ನು ರುಬ್ಬಿಕೊಂಡು ಅದರ ರಸ ತೆಗೆಯಿರಿ. ಒಂದು ಚಮಚ ಲಿಂಬೆ ರಸವನ್ನು ಇದಕ್ಕೆ ಬೆರೆಸಿ. ಅದೇ ರೀತಿಯಲ್ಲಿ ಒಂದು ಚಮಚ ಜೇನುತುಪ್ಪ ಕೂಡ ಹಾಕಿ ಮಿಶ್ರಣ ಮಾಡಿ. ಇದು ವಾಕರಿಕೆ, ವಾಂತಿ ಮತ್ತು ಅಜೀರ್ಣದಿಂದಾಗಿ ಉಂಟಾಗಿರುವ ವಾಯುವಿನ ಸಮಸ್ಯೆ ಕಡಿಮೆ ಮಾಡುವುದು.

ಉರಿಯೂತ ಶಮನಕಾರಿ ಗುಣ ಹೊಂದಿರುವಂತಹ ಕೊತ್ತಂಬರಿ ಬೀಜಗಳು ಹೊಟ್ಟೆಯ ಸಮಸ್ಯೆ ಮತ್ತು ಅಜೀರ್ಣ ಸಮಸ್ಯೆ ದೂರ ಮಾಡುವುದು. ಅದೇ ರೀತಿ ಇದು ಜೀರ್ಣಕ್ರಿಯೆಯನ್ನು ಉತ್ತಮಪಡಿಸುವುದು.

ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ಲಿಂಬೆ ರಸ ಮತ್ತು ಒಂದು ಚಮಚ ಜೇನುತುಪ್ಪ ಮಿಶ್ರಣ ಮಾಡಿಕೊಳ್ಳಿ. ಇದನ್ನು ಊಟದ ಬಳಿಕ ಸೇವನೆ ಮಾಡಿ. ಲಿಂಬೆ ಮತ್ತು ಬಿಸಿ ನೀರು ಅಜೀರ್ಣ ಸಮಸ್ಯೆಗೆ ತುಂಬಾ ಪರಿಣಾಮಕಾರಿ ಮನೆಮದ್ದು.

ಕ್ಯಾರೆಟ್ ಒಂದು ಅದ್ಭುತ ಆಹಾರವಾಗಿದ್ದು, ಇದು ಹೊಟ್ಟೆಯ ಸಮಸ್ಯೆಯನ್ನು ನಿವಾರಣೆ ಮಾಡುವುದು. ಒಂದು ಮಿಕ್ಸಿಗೆ ಸ್ವಲ್ಪ ಕ್ಯಾರೆಟ್, ಒಂದು ಬಾಳೆಹಣ್ಣು ಮತ್ತು ಸ್ವಲ್ಪ ನೀರು ಹಾಕಿ. ಇದರ ಜ್ಯೂಸ್ ಮಾಡಿಕೊಂಡು ಕುಡಿಯಿರಿ. ಇದು ಹೊಟ್ಟೆಯು ಆಮ್ಲವನ್ನು ಹೀರಿಕೊಳ್ಳಲು ನೆರವಾಗುವುದು ಮತ್ತು ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ ನಿವಾರಿಸುವುದು.

ಅತಿಸಾರ ಮತ್ತು ಅಜೀರ್ಣ ಸಮಸ್ಯೆಯನ್ನು ನಿವಾರಣೆ ಮಾಡಲು ಮೊಸರು ತುಂಬಾ ಪರಿಣಾಮಕಾರಿ ಮನೆಮದ್ದು. ಒಂದು ಪಿಂಗಾಣಿ ಮೊಸರಿಗೆ ಸ್ವಲ್ಪ ಜೀರಿಗೆ ಮತ್ತು ಉಪ್ಪು ಹಾಕಿಕೊಂಡು ಸೇವನೆ ಮಾಡಿದರೆ ಅದರಿಂದ ಅಜೀರ್ಣ ಸಮಸ್ಯೆಯು ಪರಿಹಾರ ಆಗುವುದು.

ಡೆಂಗ್ಯೂ, ಮಲೇರಿಯಾದಂತಹ ಸಾಂಕ್ರಮಿಕ ರೋಗಗಳಿಂದ ದೂರವಾಗಲು ಇಲ್ಲಿವೆ ಟಿಪ್ಸ್

Follow Us on :-