ಎಣ್ಣೆ ಬಾಟಲಿ ಕ್ಲೀನ್ ಮಾಡಲು ಟಿಪ್ಸ್

ಸಾಮಾನ್ಯವಾಗಿ ಎಣ್ಣೆ ಹಾಕುವ ಬಾಟಲಿ ಜಿಡ್ಡುಗಟ್ಟಿ ಅಂಟು ಅಂಟಾಗಿರುತ್ತದೆ. ಇದನ್ನು ತೊಳೆದರೂ ಅಂಟು ಹೋಗುವುದಿಲ್ಲ ಎಂಬ ತಲೆನೋವು ಇದ್ದೇ ಇರುತ್ತದೆ. ಹಾಗಾಗಿ ಎಣ್ಣೆ ಹಾಕಿದ ಬಾಟಲಿಯನ್ನು ಸಂಪೂರ್ಣವಾಗಿ ಕ್ಲೀನ್ ಮಾಡಲು ಈ ಟಿಪ್ಸ್ ಬಳಸಿ.

Photo Credit: Instagram, AI image

ಮೊದಲು ಬಾಟಲಿಯಲ್ಲಿ ಉಳಿದಿರುವ ಎಣ್ಣೆಯನ್ನು ಟಿಶ್ಯೂ ಪೇಪರ್ ಬಳಸಿ ಒರೆಸಿಕೊಳ್ಳಿ

ಬಳಿಕ ಒಂದು ಪಾತ್ರೆಯಲ್ಲಿ ಹದ ಬಿಸಿ ನೀರು ಮಾಡಿ ಅದಕ್ಕೆ ಸ್ವಲ್ಪ ಡಿಟರ್ಜೆಂಟ್ ಹಾಕಿಡಿ

ಇದಕ್ಕೆ ಜಿಡ್ಡು ಹಟ್ಟಿದ ಪಾತ್ರೆಯನ್ನು ಹಾಕಿ ಕೆಲವು ಸಮಯ ಅದ್ದಿಟ್ಟು ಬಳಿಕ ತೊಳೆಯಿರಿ

ಇದಲ್ಲದೇ ಹೋದರೆ ಹದ ಬಿಸಿ ನೀರಿಗೆ ಸ್ವಲ್ಪ ಬೇಕಿಂಗ್ ಸೋಡಾ ಹಾಕಿ ಅದರಲ್ಲಿ 15 ನಿಮಿಷ ನೆನೆಸಿಡಿ

ಹೀಗೆ ನೆನಸಿಟ್ಟ ಬಾಟಲಿಯನ್ನು ಸೋಪ್ ಹಾಕಿ ಟೂತ್ ಬ್ರಷ್ ನಿಂದ ಚೆನ್ನಾಗಿ ತೊಳೆದುಕೊಳ್ಳಿ.

ಈಗ ಮತ್ತೊಮ್ಮೆ 10 ನಿಮಿಷಗಳಷ್ಟು ಕಾಲ ಫ್ರೆಶ್ ಆಗಿರುವ ಬಿಸಿ ನೀರಿನಲ್ಲಿ ನೆನೆಸಿಡಿ

ಬಳಿಕ ಬಿಸಿಲಿಗೆ ಬಾಟಲಿಯನ್ನು ಚೆನ್ನಾಗಿ ಒಣಗಿಸಿ ಬಳಸಿದರೆ ಜಿಡ್ಡು, ವಾಸನೆ ಎಲ್ಲವೂ ಮಾಯವಾಗುತ್ತದೆ

ಬ್ಯಾಚುಲರ್ಸ್ ಮಾಡಬಹುದಾದ ಗೊಜ್ಜು ರೆಸಿಪಿ

Follow Us on :-