ಐದೇ ನಿಮಿಷದಲ್ಲಿ ಮಿಕ್ಸಿ ಜಾರ್ ಹಿಂಭಾಗ ಕ್ಲೀನ್ ಮಾಡಿ

ಮಿಕ್ಸಿ ಜಾರ್ ನ ಹಿಂಭಾಗ ಆಹಾರದ ಕೊಳೆ ಸೇರಿಕೊಂಡು ಕೊಳಕಾಗಿಬಿಡುತ್ತದೆ. ಇದನ್ನು ಕ್ಲೀನ್ ಮಾಡಲು ಸುಲಭ ಉಪಾಯ ಇಲ್ಲಿದೆ ನೋಡಿ.

Photo Credit: WD, Instagram

ತಳಭಾಗ ಕೊಳೆ ತುಂಬಿಕೊಂಡು ಬ್ಲೇಡ್ ಹಾಳಾಗುವ ಅಪಾಯವಿದೆ.

ಟೂತ್ ಬ್ರಷ್ ನ್ನು ಬಿಸಿ ಮಾಡಿ ತಲೆ ಭಾಗವನ್ನು ಸ್ವಲ್ಪ ಬಾಗಿಸಿಕೊಳ್ಳಿ

ಮಿಕ್ಸಿ ಜಾರ್ ನ ಹಿಂಭಾಗಕ್ಕೆ ಸ್ವಲ್ಪ ಬೇಕಿಂಗ್ ಸೋಡಾ ಹಾಕಿ

ಇದಕ್ಕೆ ಎರಡು ಸ್ಪೂನ್ ವಿನೇಗರ್ ದ್ರಾವಣ ಹಾಕಿ 5 ನಿಮಿಷ ಬಿಡಿ

ಬಳಿಕ ಸ್ವಲ್ಪ ನೀರು ಹಾಕಿ ಟೂರ್ ಬ್ರಷ್ ನಿಂದ ಚೆನ್ನಾಗಿ ಬ್ರಷ್ ಮಾಡಿ

ಬಳಿಕ ಶುದ್ಧ ನೀರಿನಿಂದ ತೊಳೆದರೆ ಹಿಂಭಾಗದಲ್ಲಿರುವ ಕೊಳೆ ಹೋಗುತ್ತದೆ

ನಂತರ ಶುದ್ಧ ಬಟ್ಟೆಯಿಂದ ಒರೆಸಿ ನೀರಿನಂಶ ತೆಗೆದು ಒಣಗಿಸಿಡಿ

ಮೊಟ್ಟೆ ಬೇಯಿಸುವಾಗ ಒಡೆಯದಂತೆ ಈ ಟಿಪ್ಸ್ ಫಾಲೋ ಮಾಡಿ

Follow Us on :-