ಅಡುಗೆ ಮನೆಯಲ್ಲಿ ನಿತ್ಯವೂ ಬಳಸುವ ಕುಕ್ಕರ್ ಸುಸ್ಥಿತಿಯಲ್ಲಿರುವುದು ತುಂಬಾ ಮುಖ್ಯ. ಹಲವು ಬಾರಿ ಕುಕ್ಕರ್ ಬ್ಲಾಸ್ಟ್ ಆಗಿ ಅಪಾಯಗಳಾದ ಬಗ್ಗೆ ಓದಿರುತ್ತೇವೆ. ಹಾಗಿದ್ದರೆ ಕುಕ್ಕರ್ ಬ್ಲಾಸ್ಟ್ ಆಗದಂತೆ ಅಪಾಯ ತಡೆಗಟ್ಟುವುದು ಹೇಗೆ ನೋಡಿ.
Photo Credit: Instagram, WD
ಕುಕ್ಕರ್ ಕೆಲವು ಸಮಯ ಉಪಯೋಗಿಸಿದ ಬಳಿಕ ಕೆಲವೊಂದು ದೋಷಗಳು ಕಂಡುಬರಬಹುದು
ಕುಕ್ಕರ್ ನ ಮುಚ್ಚಳದಲ್ಲಿ ದೋಷಗಳಿದ್ದರೆ ಬ್ಲಾಸ್ಟ್ ಆಗುವ ಸಾಧ್ಯತೆಗಳಿವೆ
ಕುಕ್ಕರ್ ನ ಗಾಸ್ಗೆಟ್ ಲೂಸ್ ಆಗಿದ್ದರೆ ಅಥವಾ ದುರ್ಬಲವಾಗಿದ್ದರೆ ತಕ್ಷಣವೇ ಬದಲಾಯಿಸಿ
ಕುಕ್ಕರ್ ನ ವಿಷಲ್ ಹಾಳಾಗಿದ್ದರೆ ಅದರಿಂದ ಲೀಕೇಜ್ ಅಥವಾ ಬ್ಲಾಸ್ಟ್ ಆಗಬಹುದು
ಕುಕ್ಕರ್ ನ ಒಳಗೆ ಪಾತ್ರೆ ಇಡುವ ಮೊದಲು ಸಾಕಷ್ಟು ನೀರು ಹಾಕುವುದನ್ನು ಮರೆಯಬೇಡಿ
ಮುಕ್ಕಾಲು ಭಾಗಕ್ಕಿಂತ ಹೆಚ್ಚು ಅಕ್ಕಿ ಅಥವಾ ತರಕಾರಿಯನ್ನು ತುಂಬಲು ಹೋಗಬೇಡಿ
ಕುಕ್ಕರ್ ನ ಪಾತ್ರೆ ಹಳತಾಗಿದ್ದರೆ ಸವೆತದಿಂದಾಗಿ ಬ್ಲಾಸ್ಟ್ ಆಗುವ ಸಾಧ್ಯತೆಗಳಿವೆ