ಶ್ಯಾವಿಗೆ ಉಪ್ಪಿಟ್ಟು ಉದುರು ಉದುರಾಗಿರಬೇಕೆಂದರೆ ಹೀಗೆ ಮಾಡಿ

ಶ್ಯಾವಿಗೆ ಉಪ್ಪಿಟ್ಟು ಚಿಕ್ಕ ಮಕ್ಕಳು ಚಪ್ಪರಿಸಿಕೊಂಡು ತಿನ್ನುವ ತಿಂಡಿ. ಸುಲಭವಾಗಿ ಮಾಡಬಹುದಾದ ಶ್ಯಾವಿಗೆ ಉಪ್ಪಿಟ್ಟು ಉದುರು ಉದುರಾಗಿ ಮಾಡಬೇಕೆಂದರೆ ಕೆಲವೊಂದು ಟಿಪ್ಸ್ ಗಳನ್ನು ಫಾಲೋ ಮಾಡಿದರೆ ಸಾಕು.

Photo Credit: Instagram

ಶ್ಯಾವಿಗೆ ಉಪ್ಪಿಟ್ಟು ಮಾಡುವ ಮೊದಲು ಅದನ್ನು ಚೆನ್ನಾಗಿ ಎಣ್ಣೆ ಹಾಕಿ ಫ್ರೈ ಮಾಡಿ

ಶ್ಯಾವಿಗೆಗೆ ಎಣ್ಣೆ ಹಾಕಿ ಫ್ರೈ ಮಾಡುವುದರಿಂದ ಅದು ಉದುರು ಉದುರಾಗುತ್ತದೆ

ಒಗ್ಗರಣೆ ಮಾಡುವಾಗ ಹೆಚ್ಚು ಎಣ್ಣೆ ಹಾಕಿದರೆ ಶ್ಯಾವಿಗೆ ಅಂಟು ಅಂಟಾಗುವುದಿಲ್ಲ

ಒಂದು ಕಪ್ ಶ್ಯಾವಿಗೆ ತೆಗೆದುಕೊಂಡರೆ ಒಂದೂವರೆ ಕಪ್ ನೀರು ಮಾತ್ರ ಹಾಕಿ

ಹೆಚ್ಚು ನೀರು ಹಾಕುವುದರಿಂದ ಶ್ಯಾವಿಗೆ ಅಂಟು ಅಂಟಾಗಿ ಮುದ್ದೆಯಾಗಬಹುದು

ಶ್ಯಾವಿಗೆಯನ್ನು ನೀರಿನಲ್ಲಿ ನೆನೆಸಿ ಮಾಡುವುದಾದರೆ ಬಿಸಿ ನೀರಿಗೆ ಕೊಂಚ ಎಣ್ಣೆ ಹಾಕಿ

ಬಿಸಿ ನೀರಿನಲ್ಲಿ ನೆನೆದ ಶ್ಯಾವಿಗೆಗೆ ಕೊಂಚ ತಣ್ಣೀರನ್ನೂ ಸೇರಿಸಿದರೆ ಉದುರು ಉದುರಾಗುತ್ತದೆ

ಮೊಟ್ಟೆಯ ಚಿಪ್ಪಿನ ಪುಡಿಯನ್ನು ಈ ರೀತಿ ಬಳಸಬಹುದು

Follow Us on :-