ನಿಮಗೆ ಶುಗರ್ ಬಂದಿದೆ ಅಂತ ಹೇಗೆ ಗೊತ್ತಾಗುತ್ತೆ: ಇಲ್ಲಿವೆ ಕೆಲ ಸಂಕೇತಗಳು

ಶುಗರ್ ರೋಗ ಎನ್ನುವುದು ಸೈಲೆಂಟ್ ಕಿಲ್ಲರ್‪ ಕಾಯಿಲೆ! ಮನುಷ್ಯನಿಗೆ ಒಮ್ಮೆ ಕಾಣಿಸಿಕೊಂಡರೆ, ಮತ್ತೆ ಆತನನ್ನು ಬಿಟ್ಟು ಹೋಗುವ ಕಾಯಿಲೆ ಅಲ್ಲವೇ ಅಲ್ಲ. ಪ್ರಮುಖವಾಗಿ ವ್ಯಕ್ತಿಯ ಆರೋಗ್ಯದ ಮೇಲೆ ವಿಪರೀತ ಹಾನಿ ಉಂಟು ಮಾಡಿ, ಆತನ ದೇಹ ಸ್ಥಿತಿಯನ್ನು ಇನ್ನಷ್ಟು ಕುಗ್ಗಿಸಿಬಿಡುತ್ತದೆ. ಹಾಗಾದ್ರೆ ಈ ಕಾಯಿಲೆಯ ಲಕ್ಷಣಗಳು ಏನು ಹಾಗೂ ಇವು ನಿಯಂತ್ರಣ ಮೀರಿದರೆ ಏನೆಲ್ಲಾ ಸಮಸ್ಯೆ ಎದುರಾಗುತ್ತದೆ ನೋಡೋಣ ಬನ್ನಿ.

photo credit social media

ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಕ್ಕೆ ಸಿಗದಿದ್ದರೆ, ದೇಹದ ಪ್ರಮುಖ ಅಂಗಾಂಗಕ್ಕೆ ರಕ್ತ ಸಂಚಾರ ಕಡಿಮೆ ಆಗಿ ಕೈಗಳಲ್ಲಿ ಹಾಗೂ ಪಾದಗಳಲ್ಲಿ ಊತದಂತಹ ಸಮಸ್ಯೆ ಕಂಡು ಬರುತ್ತದೆ. ಇಲ್ಲಾಂದ್ರೆ ಮುಳ್ಳು ಚುಚ್ಚಿದಂತಹ ಅನುಭವ ಉಂಟಾಗುತ್ತದೆ.

ಬೆಳಗ್ಗೆ ಎದ್ದಾಗ, ಕಣ್ಣು ಮಂಜಾಗತ್ತಿದ್ದರೆ ಅಥವಾ ಎದುರಿಗೆ ಇದ್ದವರು ಮಬ್ಬಾಗಿ ಕಾಣುತ್ತಿದ್ದರೆ, ಮೊದಲಿಗೆ ತ್ವರಿತವಾಗಿ ಸಕ್ಕರೆ ಮಟ್ಟವನ್ನು ಪರಿಶೀಲಿಸಬೇಕು. ಯಾಕೆಂದ್ರೆ ಇದು ಕೂಡ ಮಧುಮೇಹದ ಆರಂಭಿಕ ಲಕ್ಷಣ! ಒಂದು ವೇಳೆ, ಈ ಲಕ್ಷಣ ವನ್ನು ನಿರ್ಲಕ್ಷಿಸಿದರೆ, ಮುಂದಿನ ದಿನಗಳಲ್ಲಿ ದೃಷ್ಟಿ ಮಂಜಾಗುತ್ತದೆ.

ಪದೇ ಪದೇ ಬಾಯಾರಿಕೆ ಆಗುತ್ತಿದ್ದರೆ ಅಥವಾ ಬೆಳಗ್ಗೆ ಎದ್ದ ಕೂಡಲೇ, ತುಂಬಾನೇ ಬಾಯಾರಿಕೆ ಆಗುವ ಅನುಭವ ಆಗುತ್ತಿ ದ್ದರೆ, ಇದು ಕೂಡ ಮಧುಮೇಹದ ಲಕ್ಷಣವೆಂದು ಪರಿಗಣಿಸಿ. ತಕ್ಷಣ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರಿಶೀಲಿಸಿ.

ಮಧುಮೇಹ ಸಮಸ್ಯೆ ನಿಯಂತ್ರಣ ಕಳೆದುಕೊಂಡರೆ ಪ್ರಮುಖ ವಾಗಿ ಹಾನಿಯಾಗುವುದು ಮೂತ್ರ ಪಿಂಡಗಳಿಗೆ ಅಥವಾ ಕಿಡ್ನಿ ಗಳಿಗೆ ಎಂದು ಹೇಳಲಾಗುತ್ತದೆ. ಹೀಗಾಗಿ, ಆಗಾಗ ಕಿಡ್ನಿಗಳ ಭಾಗ ದಲ್ಲಿ ನೋವು ಕಾಣಿಸಿಕೊಳ್ಳುತ್ತಿದ್ದರೆ, ಮಧುಮೇಹದ ಜೊತೆಗೆ ಕಿಡ್ನಿಗಳಿಗೆ ಸಂಬಂಧಪಟ್ಟ ನೋವು ಕಂಡುಬರುತ್ತದೆ.

ರಕ್ತದಲ್ಲಿನ ಸಕ್ಕರೆ ಪ್ರಮಾಣದಲ್ಲಿ ಏರುಪೇರಾದರೆ, ಆಗಾಗ್ಗೆ ಮೂತ್ರ ವಿಸರ್ಜನೆಗೆ ಅವಸರವಾಗುವುದು! ಹೀಗಾಗಿ ಈ ಸಮಸ್ಯೆ ಪದೇ ಪದೇ ಕಾಡುತ್ತಿದ್ದರೆ, ಕೂಡಲೇ ಶುಗರ್ ಟೆಸ್ಟ್ ಮಾಡಿಸಿ ಕೊಳ್ಳಿ.

ಈ ಬಗ್ಗೆ ತಜ್ಞರು ಹೇಳುವ ಪ್ರಕಾರ, ದೇಹವು ರಕ್ತದಲ್ಲಿನ ಗ್ಲೂಕೋಸ್ ಅನ್ನು ಸರಿಯಾಗಿ ಪ್ರಕ್ರಿಯೆಗೊಳಿಸಲು ಸಾಧ್ಯವಾ ಗದಿದ್ದಾಗ, ಅದು ಕೊಬ್ಬಿನ ಸಂಗ್ರಹಗಳನ್ನು ಬಳಸಿಕೊಳ್ಳುತ್ತದೆ. ಇದರಿಂದಾಗಿ ದೇಹದ ತೂಕ ಇದ್ದಕ್ಕಿದ್ದಂತೆ ಕಡಿಮೆ ಆಗುತ್ತಾ ಹೋಗುತ್ತದೆ.

ಗಾಯವಾದರೆ ಗುಣವಾಗಲು ಹೆಚ್ಚು ಸಮಯ ಹಿಡಿಯುವುದು. ದೇಹದಲ್ಲಿ ಆಕಸ್ಮಾತ್ ಆಗಿ ಆಗುವ ಸಣ್ಣ-ಪುಟ್ಟ ಗಾಯಗಳು ಗುಣಹೊಂದಲು ಹೆಚ್ಚು ಸಮಯ ಹಿಡಿಯುವುದು!

ಹೊಟ್ಟೆಯ ಬೊಜ್ಜು ಕರಗಿಸಲು ಸರಳ ಟಿಪ್ಸ್

Follow Us on :-