ಹೊಟ್ಟೆಯ ಬೊಜ್ಜು ಕರಗಿಸಲು ಸರಳ ಟಿಪ್ಸ್

ಹೊಟ್ಟೆಯ ಕೊಬ್ಬು ಆರೋಗ್ಯಕ್ಕೆ ತುಂಬಾ ಹಾನಿಕರ. ಇದರಿಂದಾಗಿ ಮಧುಮೇಹದಿಂದ ಹಿಡಿದುಹೃದಯದ ಸಮಸ್ಯೆ, ನಿದ್ರಾಹೀನತೆ ಮತ್ತು ಕ್ಯಾನ್ಸರ್ ನಂತಹ ಹಲವಾರು ಆರೋಗ್ಯ ಸಮಸ್ಯೆಗಳುಕಾಣಿಸಿಕೊಳ್ಳಬಹುದು. ಹೊಟ್ಟೆಯ ಬೊಜ್ಜು ವ್ಯಕ್ತಿಯೊಬ್ಬನ ಆತ್ಮವಿಶ್ವಾಸ ಕುಗ್ಗಿಸುವುದುಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

photo credit social media

ಚಯಾಪಚಯ ಹೆಚ್ಚಿಸುವ ಮತ್ತೊಂದು ಅಧ್ಬುತ ಆಹಾರವೆಂದರೆ ಅದು ಸಿಟ್ರಸ್ ಹಣ್ಣುಗಳು. ಇದರಲ್ಲಿ ವಿಟಮಿನ್ ಸಿ ಉನ್ನತ ಮಟ್ಟದಲ್ಲಿದೆ ಮತ್ತು ಇದು ತೂಕ ಕಳೆದುಕೊಳ್ಳಲು ಸಹಕಾರಿ ಆಗಿರುವುದು. ಲಿಂಬೆ, ಕಿತ್ತಳೆ ಅಥವಾ ಈ ಮೂರು ಹಣ್ಣುಗಳ ರಸವನ್ನು ನೀರಿಗೆ ಹಾಕಿ ದಿನವಿಡಿ ಕುಡಿಯುತ್ತಾ ಇರಿ. ನೀವು ಸಕ್ಕರೆಯಿರುವ ತಿಂಡಿ ತಿನ್ನುವ ಬದಲಿಗೆ ಕಿತ್ತಳೆ ಹಣ್ಣು ಅಥವಾ ದ್ರಾಕ್ಷಿ ತಿನ್ನಿ.

ಹೊಟ್ಟೆಯ ಕೊಬ್ಬು ಕರಗಿಸುವ ಮತ್ತೊಂದು ಆಹಾರವೆಂದರೆ ಅದು ಎಳೆ ನೀರು. ನೀವು ಆಹಾರ ಕ್ರಮದಲ್ಲಿ ಸೀಯಾಳ ಅಥವಾ ತೆಂಗಿನ ಹಾಲನ್ನು ಬಳಸಿಕೊಳ್ಳಿ. ಇದನ್ನು ಸ್ಮೂಥಿ ಮಾಡಿ ಸೇವಿಸಬಹುದು. ಬೆಣ್ಣೆಗೆ ಬದಲು ತೆಂಗಿನ ಎಣ್ಣೆ ಅಡುಗೆಗೆ ಬಳಸಿ.

ಬ್ರಾಕೋಲಿಯು ಚಯಾಪಚಯ ಹೆಚ್ಚಿಸಲು ನೆರವಾಗುವುದು ಮತ್ತು ಹೊಟ್ಟೆಯ ಕೊಬ್ಬು ಕರಗಿಸುವುದು. ಇದರಲ್ಲಿ ಒಂದು ಕಪ್ ನಲ್ಲಿ ಕೇವಲ 30 ಕ್ಯಾಲರಿ ಮಾತ್ರ ಇರುವುದು. ಹೊಟ್ಟೆಯ ಕೊಬ್ಬು ಕರಗಿಸಲು ಇದಕ್ಕಿಂತ ಹೆಚ್ಚು ಇನ್ನೇನು ಬೇಕು ಹೇಳಿ?

ಹೊಟ್ಟೆಯು ತುಂಬಿರುವಂತೆ ಮಾಡುವುದು ಮಾತ್ರವಲ್ಲದೆ, ಆರೋಗ್ಯಕಾರಿ ಪ್ರೋಟೀನ್ ನೆರವಿನಿಂದಾಗಿ ಇದು ತೂಕ ಕಳೆದುಕೊಳ್ಳಲು ನೆರವಾಗುವುದು ಮತ್ತು ಚಯಾಪಚಯ ಕ್ರಿಯೆ ವೃದ್ಧಿಸುವುದು. ಬಾದಾಮಿ, ಅಕ್ರೋಟ, ಗೋಂಡಬಿ, ಪಿಸ್ತಾ, ಚಿಯಾ ಬೀಜಗಳು ಇತ್ಯಾದಿಗಳು ಇದಕ್ಕೆ ಒಳ್ಳೆಯ ಉದಾಹರಣೆ

ತುಂಬಾ ಖಾರವಾಗಿರುವಂಹತ ಮೆಣಸುಗಳು ಹೊಟ್ಟೆಯ ಕೊಬ್ಬು ಕರಗಿಸುವಲ್ಲಿ ತುಂಬಾ ಮಹತ್ವದ ಪಾತ್ರ ವಹಿಸುವುದು ಮತ್ತು ಹಸಿವನ್ನು ಇದು ಕಡಿಮೆ ಮಾಡುವುದು. ಇದು ಆರೋಗ್ಯಕಾರಿ ಚಯಾಪಚಯ ಕ್ರಿಯೆ ವೃದ್ಧಿಸುವ ವಿಟಮಿನ್ ಸಿಯನ್ನು ಒದಗಿಸುವುದು.

ನೀವು ತಿನ್ನುವಂತಹ ಕಾರ್ಬೋಹೈಡ್ರೇಟ್ಸ್ ಗಳನ್ನು ಅರ್ಧಕ್ಕೆ ಇಳಿಸಿಕೊಳ್ಳಿ. ಸಂಸ್ಕರಿಸಿರುವಂತಹ ಕಾರ್ಬ್ಸ್ ತುಂಬಾ ಹಾನಿ ಉಂಟು ಮಾಡುವುದು. ಇದರಲ್ಲಿ ಮುಖ್ಯವಾಗಿ ಬಿಳಿ ಬ್ರೆಡ್, ಪಾಸ್ತಾ ಮತ್ತು ಹಿಟ್ಟು. ಇದರಿಂದ ಇದೆಲ್ಲವನ್ನು ನೀವು ತ್ಯಜಿಸಿ

ನೀವು ತಿನ್ನುವಂತಹ ಕಾರ್ಬೋಹೈಡ್ರೇಟ್ಸ್ ಗಳನ್ನು ಅರ್ಧಕ್ಕೆ ಇಳಿಸಿಕೊಳ್ಳಿ. ಸಂಸ್ಕರಿಸಿರುವಂತಹ ಕಾರ್ಬ್ಸ್ ತುಂಬಾ ಹಾನಿ ಉಂಟು ಮಾಡುವುದು. ಇದರಲ್ಲಿ ಮುಖ್ಯವಾಗಿ ಬಿಳಿ ಬ್ರೆಡ್, ಪಾಸ್ತಾ ಮತ್ತು ಹಿಟ್ಟು. ಇದರಿಂದ ಇದೆಲ್ಲವನ್ನು ನೀವು ತ್ಯಜಿಸಿ

ಧಾರ್ಮಿಕ ಕಾರ್ಯಗಳಲ್ಲಿ ಅರಿಶಿನದ ಮಹತ್ವವೇನು..? ಅರಿಶಿನದ ಬಗ್ಗೆ ತಿಳಿದುಕೊಳ್ಳಿ.

Follow Us on :-