ಅಜೀರ್ಣದಿಂದಾಗಿ ಬರುವ ಸಣ್ಣ ಪುಟ್ಟ ಹೊಟ್ಟೆ ನೋವಿಗೆ ಔಷಧಿಗಾಗಿ ವೈದ್ಯರ ಬಳಿಗೆ ಓಡಬೇಕಾಗಿಲ್ಲ. ಮನೆಯಲ್ಲಿಯೇ ಕೆಲವು ಮದ್ದು ಮಾಡಿಕೊಂಡು ಪರಿಹರಿಸಬಹುದು. ಸಾಮಾನ್ಯವಾಗಿ ಕಾಡುವ ಹೊಟ್ಟೆ ನೋವಿಗೆ ಮನೆ ಮದ್ದು ಏನು ನೋಡಿ.
Photo Credit: Social Media
ಅಜೀರ್ಣದಿಂದಾಗಿ ಬರುವ ಹೊಟ್ಟೆ ನೋವು ಸೇರಿದಂತೆ ಎಲ್ಲಾ ಸಮಸ್ಯೆಗಳಿಗೆ ಚೆನ್ನಾಗಿ ನೀರು ಕುಡಿಯುವುದೇ ಪರಿಹಾರ
ಹೊಟ್ಟೆ ನೋವಾಗುತ್ತಿರುವಾಗ ಅಂಗಾತ ನೆಲದಲ್ಲಿ ಮಲಗಿದರೆ ಕೊಂಚ ಮಟ್ಟಿಗೆ ನೋವು ಉಪಶಮನವಾಗುತ್ತದೆ
ಅಜೀರ್ಣವಾಗಿದ್ದರೆ ಅಥವಾ ಗ್ಯಾಸ್ಟ್ರಿಕ್ ಆಗಿ ಹೊಟ್ಟೆನೋವಾಗುತ್ತಿದ್ದರೆ ಒಂದು ಚೂರು ಶುಂಠಿ ಜಗಿಯಿರಿ
ಹೊಟ್ಟೆ ನೋವಾಗುತ್ತಿರುವಾಗ ಮೃದುವಾದ ಗಂಜಿ ಅನ್ನವನ್ನು ಸೇವಿಸುವುದರಿಂದ ರಿಲೀಫ್ ಸಿಗುತ್ತದೆ
ಪದೇ ಪದೇ ಈ ರೀತಿ ಹೊಟ್ಟೆ ನೋವು ಕಾಡುತ್ತಿದ್ದರೆ ಮದ್ಯಪಾನ, ಧೂಮಪಾನ ಅಭ್ಯಾಸಗಳನ್ನು ಬಿಡಿ
ಜೀರ್ಣವಾಗಲು ಕಷ್ಟವಾಗುವಂತಹ ಕಠಿಣ ಆಹಾರವನ್ನು ಸೇವಿಸುವುದನ್ನು ಕಡಿಮೆ ಮಾಡಿ
ಅಜೀರ್ಣದಿಂದ ಹೊಟ್ಟೆನೋವಾಗುತ್ತಿರುವಾಗ ಅಲ್ಯುವೀರಾ ಜ್ಯೂಸ್ ಸೇವಿಸಿದರೆ ಪರಿಹಾರ ಸಿಗುತ್ತದೆ.