ಕೈ ಸುಟ್ಟುಕೊಂಡರೆ ಈ ಮನೆ ಮದ್ದು ಪ್ರಯೋಗಿಸಿ

ಅಡುಗೆ ಮಾಡುವಾಗ ಕೈ ಸುಟ್ಟುಕೊಳ್ಳುವುದು ಸರ್ವೇ ಸಾಮಾನ್ಯ. ಈ ರೀತಿ ಸಣ್ಣ ಪುಟ್ಟ ರೀತಿಯಲ್ಲಿ ಕೈ, ಮೈ ಸುಟ್ಟುಕೊಂಡರೆ ಅದಕ್ಕೆ ಮನೆಯಲ್ಲಿಯೇ ಸಿಗುವ ವಸ್ತುಗಳಿಂದ ಪರಿಹಾರ ಕಂಡುಕೊಳ್ಳಬಹುದು. ಕೈ ಸುಟ್ಟುಕೊಂಡರೆ ಮನೆ ಮದ್ದುಗಳೇನು ನೋಡೋಣ.

Photo Credit: Social Media

ಪಾತ್ರೆ ಅಥವಾ ಒಲೆಯ ಬಿಸಿಗೆ ಕೈ ಸುಟ್ಟುಕೊಂಡರೆ ತಕ್ಷಣಕ್ಕೆ ತಣ್ಣಗಿನ ನೀರಿನಲ್ಲಿ ಕೈ ಅದ್ದಿಟ್ಟುಕೊಳ್ಳಿ

ಸುಟ್ಟ ಜಾಗಕ್ಕೆ ಟೂತ್ ಪೇಸ್ಟ್ ನ್ನು ಹಚ್ಚಿದರೆ ಗಾಯದಿಂದಾಗುವ ಉರಿ ಕಡಿಮೆಯಾಗುವುದು

ಸುಟ್ಟುಕೊಂಡ ಜಾಗಕ್ಕೆ ಅಲ್ಯುವೀರಾ ರಸವನ್ನು ಹಚ್ಚಿಕೊಂಡರೆ ಉರಿಯಾಗದು ಮತ್ತು ಗುಳ್ಳೆಯೂ ಬರದು

ಅಡುಗೆ ಮನೆಯಲ್ಲಿ ಜೇನು ತುಪ್ಪವಿದ್ದರೆ ಸುಟ್ಟ ಜಾಗಕ್ಕೆ ಲೇಪನ ಮಾಡಿದರೆ ಗುಳ್ಳೆಗಳು ಬಾರದು

ಸಾಸಿವೆ ಎಣ್ಣೆ ಮತ್ತು ಉಪ್ಪು ಮಿಶ್ರ ಮಾಡಿ ಹಚ್ಚಿಕೊಂಡರೆ ಗುಳ್ಳೆ ಮತ್ತು ಉರಿ ತಡೆಯಬಹುದು

ಕೊಬ್ಬರಿ ಎಣ್ಣೆಯಿದ್ದರೆ ಸುಟ್ಟ ಜಾಗಕ್ಕೆ ತಕ್ಷಣವೇ ಹಚ್ಚಿಕೊಳ್ಳುವುದರಿಂದ ಉರಿ ಕಡಿಮೆಯಾಗುವುದು

ಕೊಬ್ಬರಿ ಎಣ್ಣೆಯಿಲ್ಲದೇ ಹೋದರೆ ತುಪ್ಪವನ್ನು ಸುಟ್ಟ ಜಾಗಕ್ಕೆ ಹಚ್ಚಿಕೊಂಡರೆ ಉರಿಯಾಗದು

ಅತಿಯಾಗಿ ಕಾಫಿ ಕುಡಿದರೆ ಹೀಗಾಗಬಹುದು

Follow Us on :-