ಸೊಳ್ಳೆ ಕಾಟ ತಡೆಯಲು ಈ ಉಪಾಯ ಮಾಡಿ

ಇತ್ತೀಚೆಗೆ ಡೆಂಗ್ಯೂ ಕಾಟ ಮಿತಿ ಮೀರುತ್ತಿದೆ. ಸೊಳ್ಳೆಗಳಿಂದ ಹರಡುವ ಜ್ವರ ಇದಾಗಿದ್ದು ಮಾರಣಾಂತಿಕವಾಗಬಹುದು. ಡೆಂಗ್ಯೂ ಜ್ವರ ಬಾರದಂತೆ ತಡೆಯಲು ಮುಖ್ಯವಾಗಿ ಸೊಳ್ಳೆ ನಿಯಂತ್ರಿಸಬೇಕು. ಸೊಳ್ಳೆ ಕಾಟ ನಿಯಂತ್ರಿಸಲು ಯಾವೆಲ್ಲಾ ಉಪಾಯಗಳಿವೆ ನೋಡಿ.

Photo Credit: Social Media

ಆದಷ್ಟು ಮನೆಯ ಸುತ್ತಮುತ್ತ ನೀರು ಕಟ್ಟಿ ನಿಲ್ಲದಂತೆ, ಕೊಳಚೆ ನೀರು ನಿಲ್ಲದಂತೆ ನೋಡಿಕೊಳ್ಳಿ

ಪ್ರತಿನಿತ್ಯ ಸಂಜೆ ಹೊತ್ತು ಕೊಂಚ ಧೂಪ ಹೊತ್ತಿಸಿ ಮನೆ ತುಂಬಾ ಧೂಮ ಹರಡಿದರೆ ಸೊಳ್ಳೆ ಬಾರದು

ಮನೆಯ ಸುತ್ತು ಆದಷ್ಟು ತುಳಸಿ ಗಿಡಗಳನ್ನು ನೆಟ್ಟರೆ ಅದರ ಪರಿಮಳಕ್ಕೆ ಸೊಳ್ಳೆ ಬಾರದು

ಹಳ್ಳಿಗಳಲ್ಲಾದರೆ ಮನೆಯ ಸುತ್ತ ಒಂದೆರಡು ಕಂಪು ಬೀರುವ ನೀಲಗಿರಿ ಮರ ಬೆಳೆಸಿ

ಚೆಂಡು ಹೂ ಅಥವಾ ಮಾರಿ ಗೋಲ್ಡ್ ಗಿಡ ನೆಟ್ಟರೆ ಅದರ ಪರಿಮಳಕ್ಕೆ ಸೊಳ್ಳೆ ಬಾರದು

ಸಂಜೆಯಾಗುತ್ತಲೇ ಕಿಟಿಕಿ, ಬಾಗಿಲು ಬಂದ್ ಮಾಡಿ 10 ನಿಮಿಷ ಕರ್ಪೂರ ಹಚ್ಚಿಡಿ

ಮನೆಯ ಸುತ್ತ ಸೊಳ್ಳೆ ಹುಟ್ಟಿಕೊಳ್ಳಬಹುದಾದ ಜಾಗಕ್ಕೆ ಬೆಳ್ಳುಳ್ಳಿ ನೀರು ಸಿಂಪಡಿಸಿ

ಹಲ್ಲಿನ ಹಳದಿ ಕಲೆ ಹೋಗಲಾಡಿಸಲು ಬೆಸ್ಟ್ ಟಿಪ್ಸ್

Follow Us on :-