ಪಾಟ್ ನಲ್ಲಿ ಬೆಳೆದ ಗಿಡಕ್ಕೆ ಕೀಟಾಣು ಬಂದರೆ ಈ ಟಿಪ್ಸ್ ಪಾಲಿಸಿ
ಟೆರೇಸ್ ಗಾರ್ಡನ್ ನಲ್ಲಿ ಮಾಡುವ ಗಿಡಗಳಿಗೆ ಕೀಟಾಣು ಬಂದು ನೀವು ಬೆಳೆದ ಬೆಳೆಗೆ ಯಾವುದೇ ಫಲ ಸಿಗುತ್ತಿಲ್ಲ ಎಂದು ಬೇಸರವಾಗಿದ್ದೀರಾ? ಹಾಗಿದ್ದರೆ ರಾಸಾಯನಿಕ ಬಳಸದೇ ಸಾವಯವವಾಗಿ ಕೀಟಾಣು ನಾಶಕವನ್ನು ನೀವೇ ತಯಾರಿಸಿ ಸಿಂಪಡಿಸಿ.
Photo Credit: Social Media
ಕಣ್ಣಿಗೂ ಗೋಚರವಾಗದಂತ ಸೂಕ್ಷ್ಮಾಣು ಜೀವಿಗಳು ಪಾಟ್ ನಲ್ಲಿ ಬೆಳೆದ ಗಿಡಗಳನ್ನು ನಾಶ ಮಾಡಬಹುದು
ಬೆಳ್ಳುಳ್ಳಿಯನ್ನು ಜಜ್ಜಿ ನೀರಿನಲ್ಲಿ ಕೊಳೆಯಿಸಿ ಆ ರಸವನ್ನು ಸಂಜೆ ವೇಳೆ ಸ್ಪ್ರೇ ಮಾಡಿದರೆ ಹುಳಗಳು ಸಾಯುತ್ತವೆ
ಸ್ವಲ್ಪ ಬೇಕಿಂಗ್ ಸೋಡಾವನ್ನು ಹುಳವಿರುವ ಸಸಿಗಳಿಗೆ ಹಾಕಿದರೆ ಹುಳಗಳನ್ನು ನಿಯಂತ್ರಿಸಬಹುದು
ನೀವು ತಿಂದು ಬಿಸಾಕುವ ಬಾಳೆಹಣ್ಣಿನ ಸಿಪ್ಪೆಯನ್ನು ನೀರಿನಲ್ಲಿ ಹಾಕಿ ಕೊಳೆಯಿಸಿ ಆ ನೀರನ್ನು ಸಿಂಪಡಣೆ ಮಾಡಿ
ಬೇವಿನ ಎಲೆಯನ್ನು ಕಷಾಯ ಮಾಡಿ ಆ ನೀರನ್ನು ಗಿಡಗಳಿಗೆ ಹಾಕುವುದರಿಂದ ಕೀಟಾಣು ನಾಶವಾಗುತ್ತದೆ
ಸಾವಯವ ಕೃಷಿಯಲ್ಲಿ ಬೆಸ್ಟ್ ಪರಿಹಾರವೆಂದರೆ ಗೋ ಮೂತ್ರವನ್ನು ಕೀಟಾಣು ಇರುವ ಗಿಡಕ್ಕೆ ಸಿಂಪಡಿಸುವುದು
ನೆನಪಿರಲಿ, ಈ ರೀತಿ ಕೀಟಾಣು ನಾಶಕವನ್ನು ಸಂಜೆ ಹೊತ್ತಿನಲ್ಲೇ ಸಿಂಪಡಿಸಿದರೆ ಗಿಡಗಳಿಗೆ ಹಾನಿಯಾಗದು