ಗಿಡಗಳಿಗೆ ಹುಳ ಬಾರದಂತೆ ಸುಲಭ ಕೀಟನಾಶಕ ತಯಾರಿಸಿ

ತಾರಸಿ ಕೃಷಿ ಮಾಡುವವರಿಗೆ ಮಳೆಗಾಲ, ಚಳಿಗಾಲದಲ್ಲಿ ಗಿಡಗಳಲ್ಲಿ ಒಂದು ರೀತಿಯ ಬಿಳಿ ಹುಳ ಬಂದು ಗಿಡಗಳು ಬಾಡಿ ಹೋಗುವ ಸಮಸ್ಯೆ ಎದುರಾಗುತ್ತದೆ. ಇದನ್ನು ತಡೆಯಲು ಮನೆಯಲ್ಲಿಯೇ ಒಂದು ಸಾವಯವ ಕೀಟನಾಶಕ ತಯಾರಿಸುವ ವಿಧಾನ ನೋಡಿ.

Photo Credit: Instagram, AI image

ಹೂವಿನ, ಹಸಿಮೆಣಸಿನಕಾಯಿ, ಟೊಮೆಟೊ ಗಿಡಗಳಲ್ಲಿ ಹೆಚ್ಚಾಗಿ ಹುಳ ಕಂಡುಬರುತ್ತದೆ

ಬಿಳಿ ಅಥವಾ ಕಪ್ಪು ಬಣ್ಣದ ಹುಳ ಎಲೆ, ಕಾಂಡವನ್ನು ಹಾಳು ಮಾಡುತ್ತದೆ

ಇದನ್ನು ತಡೆಯಲು ಅರಿಶಿನ, ನಿಂಬೆ ರಸ, ಡಿಟರ್ಜೆಂಟ್ ಸೇರಿಸಿ ಕೀಟನಾಶಕ ತಯಾರಿಸಬಹುದು

ಮೊದಲಿಗೆ ಒಂದು ಬೌಲ್ ನಲ್ಲಿ ಒಂದು ಲೀಟರ್ ನೀರಿಗೆ ಒಂದು ಸ್ಪೂನ್ ಅರಿಶಿನ ಹಾಕಿ

ಇದನ್ನು ಮಿಕ್ಸ್ ಮಾಡಿದ ಬಳಿಕ ಒಂದು ಸ್ಪೂನ್ ಡಿಟರ್ಜೆಂಟ್ ಮಿಕ್ಸ್ ಮಾಡಿ

ಇದಕ್ಕೆ ಎರಡು ಸ್ಪೂನ್ ನಷ್ಟು ನಿಂಬೆ ರಸವನ್ನು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ

ಈ ಮಿಶ್ರಣವನ್ನು ಒಂದು ಸ್ಪ್ರೇ ಬಾಟಲಿಗೆ ಹಾಕಿಕೊಂಡು ಹುಳವಿರುವ ಜಾಗಕ್ಕೆ ಸ್ಪ್ರೇ ಮಾಡಿ

ಮೀನು ತುಂಬಾ ದಿನದವರೆಗೆ ಫ್ರೆಶ್ ಆಗಿಡಲು ಟಿಪ್ಸ್

Follow Us on :-