ಈ ಕಾರಣಕ್ಕೆ ಮಶ್ರೂಮ್ ಸೇವಿಸಲೇಬೇಕು

ಸಸ್ಯಾಹಾರಿಗಳ ಪಾಲಿಗೆ ಮಾಂಸಾಹಾರದಷ್ಟೇ ಪೋಷಕಾಂಶಗಳನ್ನು ಕೊಡುವ ಆಹಾರ ವಸ್ತುವೆಂದರೆ ಮಶ್ರೂಮ್. ಇದನ್ನು ಸೇವಿಸುವುದರಿಂದ ದೇಹಕ್ಕೆ ಅನೇಕ ಉಪಯೋಗಗಳಿವೆ. ಮಶ್ರೂಮ್ ಸೇವನೆಯ ಲಾಭಗಳೇನು ನೋಡೋಣ.

credit: social media

ಸಸ್ಯಾಹಾರಿಗಳ ಪಾಲಿಗೆ ಮಾಂಸಾಹಾರದಷ್ಟೇ ಪೋಷಕಾಂಶ ಕೊಡುವ ಆಹಾರ

ಮಾಂಸಾಹಾರವೂ ಅಲ್ಲ, ಸಸ್ಯಾಹಾರವೂ ಅಲ್ಲ ಎನ್ನುವ ‘ಫಂಗಿ’ ವರ್ಗಕ್ಕೆ ಸೇರಿದ ಆಹಾರ

ವಿಟಮಿನ್ ಡಿ, ಬಿ ಅಂಶವಿರುವ ಮಶ್ರೂಮ್ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ವಿಟಮಿನ್ ಡಿ ಅಂಶ ಹೇರಳವಾಗಿರುವುದರಿಂದ ಎಲುಬುಗಳು ಗಟ್ಟಿಯಾಗುವುದಕ್ಕೆ ಉತ್ತಮ

ಮಶ್ರೂಮ್ ಗಳಲ್ಲಿ ಮೆದುಳಿನ ಆರೋಗ್ಯ ವೃದ್ಧಿಗೆ ಬೇಕಾದ ಅಂಶಗಳಿದ್ದು, ಸ್ಮರಣ ಶಕ್ತಿಯನ್ನೂ ಹೆಚ್ಚಿಸುತ್ತದೆ

ಪೋಷಕಾಂಶಗಳನ್ನು ಚೆನ್ನಾಗಿ ಹೀರಿಕೊಳ್ಳುಗವುದರ ಜೊತೆಗೆ ಜೀರ್ಣಶಕ್ತಿಯನ್ನೂ ಸುಧಾರಿಸುತ್ತದೆ

ಆಂಟಿ ಆಕ್ಸಿಡೆಂಟ್ ಗಳು ಹೇರಳವಾಗಿದ್ದು ಹೃದಯ, ಕ್ಯಾನ್ಸರ್ ನಂತಹ ಗಂಭೀರ ಖಾಯಿಲೆ ತಡೆಗಟ್ಟುತ್ತದೆ

ಹೋಳಿ ಹಬ್ಬಕ್ಕೆ ಚರ್ಮ ಸಂರಕ್ಷಣೆಗೆ ಟಿಪ್ಸ್

Follow Us on :-