ಅತಿಯಾದ ತಲೆಹೊಟ್ಟಿಗೆ ಆಹಾರವೂ ಕಾರಣ

ತಲೆಹೊಟ್ಟು ಇತ್ತೀಚೆಗಿನ ದಿನಗಳಲ್ಲಿ ಎಲ್ಲರಿಗೂ ಕಾಡುವಂತಹ ಸಮಸ್ಯೆ. ಇದಕ್ಕೆ ನಾವು ಅನೇಕ ಮನೆ ಮದ್ದುಗಳನ್ನು ಮಾಡುವುದನ್ನು ನೋಡುತ್ತೇವೆ. ಆದರೆ ತಲೆಹೊಟ್ಟಿಗೆ ನಾವು ಸೇವಿಸುವ ಕೆಲವು ಆಹಾರಗಳೂ ಕಾರಣವಾಗಬಹುದು.

credit: social media

ಅತಿಯಾಗಿ ಸಕ್ಕರೆ ಅಂಶವಿರುವ ಅಥವಾ ಸಂಸ್ಕರಿತ ಆಹಾರಗಳನ್ನು ಸೇವನೆ ಮಾಡಬಾರದು

ಆಹಾರದಲ್ಲಿ ಒಮೆಗಾ-3 ಫ್ಯಾಟಿ ಆಸಿಡ್ ನ ಅಂಶ ಕಡಿಮೆಯಾದಾಗ ತಲೆಹೊಟ್ಟಿನ ಸಮಸ್ಯೆಯಾಗಬಹುದು

ಆಹಾರದಲ್ಲಿ ವಿಟಮಿನ್ ಬಿ ಮತ್ತು ಜಿಂಕ್ ಅಂಶ ಕಡಿಮೆಯಾದಾಗ ತಲೆಹೊಟ್ಟಿಗೆ ಕಾರಣವಾಗಬಹುದು

ಡೈರಿ ಉತ್ಪನ್ನ ಆರೋಗ್ಯಕ್ಕೆ ಉತ್ತಮ ಎಂದು ಅತಿಯಾಗಿ ಸೇವನೆ ಮಾಡಿದರೆ ಸಮಸ್ಯೆಯಾಗಬಹುದು

ಮದ್ಯಪಾನ ಮತ್ತು ಆಲ್ಕೋಹಾಲ್ ಅಂಶವನ್ನು ಮಿತಿ ಮೀರಿ ಬಳಸಿದರೆ ತಲೆಹೊಟ್ಟಾಗಬಹುದು

ಕೆಲವೊಂದು ಆಹಾರಗಳಿಂದ ಅಲರ್ಜಿ ರಿಯಾಕ್ಷನ್ ಆಗಿ ತಲೆಹೊಟ್ಟಿಗೆ ಕಾರಣವಾಗಬಹುದು.

ಅಷ್ಟೇ ದೇಹ ನಿರ್ಜಲೀಕರಣಕ್ಕೊಳಗಾದಾಗ ತಲೆಹೊಟ್ಟು ಸಹಜವಾಗಿಯೇ ಹೆಚ್ಚಾಗಬಹುದು.

ಕೊಲೆಸ್ಟ್ರಾಲ್ ನಿಯಂತ್ರಿಸಲು ಈ ಆಹಾರ ಸೇವಿಸಿ

Follow Us on :-