ತಕ್ಷಣ ನಿದ್ರೆ ಬರಲು ಈ ಆಹಾರ ತಿನ್ನಿ!

ನಮ್ಮ ಇಂದಿನ ಒತ್ತಡದ ಜೀವನದ ಶೈಲಿಯಿಂದಾಗಿ ಮಲಗಿದ ತಕ್ಷಣ ನಿದ್ರೆ ಎನ್ನುವುದು ಕನಸಾಗಿದೆ. ಹಾಗಿದ್ದರೆ ಮಲಗಿದ ತಕ್ಷಣ ಸುಖ ನಿದ್ರೆ ನಿಮ್ಮದಾಗಬೇಕಾದರೆ ಯಾವ ಆಹಾರ ಸೇವಿಸಬೇಕು ನೋಡೋಣ.

credit: social media

ಮಲಗುವ ಮುನ್ನ ಬಿಸಿ ನೀರಿನಲ್ಲಿ ತಲೆ ಸ್ನಾನ ಮಾಡಿಕೊಂಡು ಮಲಗಿ.

ಮಲಗುವ ಮುನ್ನ ಒಂದು ಲೋಟ ಹಾಲಿನ ಜೊತೆ ಒಂದು ಬಾಳೆ ಹಣ್ಣು ಸೇವಿಸಿ.

ಮಲಗುವ ಮುನ್ನ ಹೆಡ್ ಮಸಾಜ್ ಅಥವಾ ಪಾದಗಳಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿ ಮಲಗಿ.

ಹಾಲನ್ನು ಹದ ಬಿಸಿ ಮಾಡಿ ಅದಕ್ಕೆ ಒಂದು ಸ್ಪೂನ್ ಜೇನು ತುಪ್ಪ ಸೇರಿಸಿ ಸೇವಿಸಿ.

ಆಹಾರದಲ್ಲಿ ಮ್ಯಾಗ್ನಿಶಿಯಂ ಅಂಶ ಹೆಚ್ಚಿರುವ ಬೇಳೆ ಕಾಳುಗಳನ್ನು ಸೇವಿಸಿ.

ಅಸಿಡಿಟಿಯಿಂದಾಗಿ ನಿದ್ರೆ ಬಾರದೇ ಇದ್ದರೆ ಜೀರಿಗೆ ನೀರು ಸೇವಿಸಿ ಮಲಗಿ.

ಮಲಗುವ ಮುನ್ನ ಹದ ಬಿಸಿ ಹಾಲಿಗೆ ಅರಶಿನ ಹಾಕಿ ಸೇವಿಸಿ.

ಮಕ್ಕಳಿಗೆ ಗಂಜಿ ನೀರು ಕೊಡುವುದರ ಉಪಯೋಗಗಳು

Follow Us on :-