ತೂಕ ಹೆಚ್ಚಳವಾಗಬೇಕಾದ್ರೆ ಇವನ್ನು ತಿನ್ನಿ

ಕೆಲವರಿಗೆ ತೂಕ ಕಡಿಮೆಯಾಗಿಸುವ ಚಿಂತೆಯಾದರೆ ಕೆಲವರಿಗೆ ತೂಕ ಹೆಚ್ಚಿಸುವ ಚಿಂತೆ. ಮೈಕೈ ತುಂಬಿಕೊಂಡು ಸದೃಢವಾಗಿ ಬೆಳೆಯಬೇಕಾದರೆ ನಾವು ಅದಕ್ಕೆ ತಕ್ಕಂತೆ ಆಹಾರ ಸೇವಿಸಬೇಕು. ತೂಕ ಹೆಚ್ಚಳವಾಗಬೇಕಾದರೆ ಯಾವ ಆಹಾರ ಸೇವಿಸಬೇಕು ನೋಡಿ.

credit: social media

ತೂಕ ಹೆಚ್ಚಳವಾಗಬೇಕಾದರೆ ಕೆನೆ ಭರಿತ ಡೈರಿ ಉತ್ಪನ್ನಗಳನ್ನು ಹೇರಳವಾಗಿ ಸೇವಿಸಬೇಕು

ಕ್ಯಾಲೊರಿ ಅಂಶ ಸಾಕಷ್ಟಿರುವ ವೈಟ್ ರೈಸ್ ನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸಿದರೆ ತೂಕ ಹೆಚ್ಚಬಹುದು

ನಟ್ಸ್ ಗಳಲ್ಲಿ ಕ್ಯಾಲೊರಿ ಅಂಶ ಹೇರಳವಾಗಿದ್ದು, ಇದನ್ನು ಸೇವಿಸುವುದರಿಂದ ಸಹಜವಾಗಿಯೇ ತೂಕ ಹೆಚ್ಚುತ್ತದೆ

ರೆಡ್ ಮೀಟ್, ಪೋರ್ಕ್ ಅಥವಾ ಬೀಫ್ ಸೇವಿಸುವುದರಿಂದ ಮಾಂಸಖಂಡಗಳು ಬೆಳೆದು ತೂಕ ಹೆಚ್ಚುತ್ತದೆ

ಸಸ್ಯಾಹಾರಿಗಳಾಗಿದ್ದರೆ ಕಾರ್ಬೋಹೈಡ್ರೇಟ್ ಮತ್ತು ಕ್ಯಾಲೊರಿ ಹೆಚ್ಚಿರುವ ಆಲೂಗಡ್ಡೆ ಸೇವಿಸಿ

ಸೋಯಾ, ಮೊಟ್ಟೆ, ಧಾನ್ಯಗಳ ಪ್ರೊಟೀನ್ ಸಪ್ಲಿಮೆಂಟ್ ಗಳನ್ನು ಸೇವಿಸುತ್ತಿದ್ದರೆ ತೂಕ ಹೆಚ್ಚಾಗುತ್ತದೆ

ನೆನಪಿರಲಿ, ದೇಹ ತೂಕ ಹೆಚ್ಚಳಕ್ಕೆ ಅನಾರೋಗ್ಯಕರ ಕೊಬ್ಬು, ಜಿಡ್ಡಿನ ಅಂಶವಿರುವ ಆಹಾರ ಪದಾರ್ಥಗಳನ್ನು ಸೇವಿಸಬೇಡಿ

ಬೇಸಿಗೆಯಲ್ಲಿ ಬಾಡಿ ಹೀಟ್ ಕಡಿಮೆ ಮಾಡಲು ಟಿಪ್ಸ್

Follow Us on :-