​ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಬಾದಾಮಿ ಸೇವಿಸಿ

ತಜ್ಞರ ಅಭಿಪ್ರಾಯದ ಪ್ರಕಾರ ಒಬ್ಬ ವ್ಯಕ್ತಿ ದಿನಕ್ಕೆ 8-10 ಬಾದಾಮಿಯನ್ನು ಸೆವಿಸಬೇಕು. ಅಧಿಕ ಬಾದಾಮಿಯನ್ನು ಸೇವಿಸಬಾರದು. ನಿತ್ಯವೂ ಅಧಿಕ ಪ್ರಮಾಣದಲ್ಲಿ ಬಾದಾಮಿಯನ್ನು ಸವಿದರೆ ಅದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು. ಅತಿಯಾದ ಸೇವನೆಯಿಂದ ಉಸಿರಾಟದ ತೊಂದರೆ, ಅಧಿಕ ತೂಕ, ವಿಷತ್ವ, ಉಸಿರು ಗಟ್ಟುವಿಕೆ, ಅಜೀರ್ಣ ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ ಮಿತವಾದ ಬಾದಾಮಿ ಸೇವನೆಯು ಹಿತವಾದ ಆರೋಗ್ಯವನ್ನು ಕಲ್ಪಿಸುವುದು.

photo credit social media

ಬಾದಾಮಿ ರುಚಿಯಲ್ಲಿ ಅದ್ಭುತ ಅನುಭವ ನೀಡುವುದು. ಇದನ್ನು ವಿವಿಧ ಬಗೆಯಲ್ಲಿ ಸೇವಿಸಬಹುದು. ಹಾಗಾಗಿ ಜನರು ಸಹ ಬಾದಾಮಿಯನ್ನು ಅದ್ಭುತ ಒಣ ಬೀಜ ಎಂದು ಪರಿಗಣಿಸುತ್ತಾರೆ. ಇದರಲ್ಲಿ ಶ್ರೀಮಂತ ಹಾಗೂ ಉತ್ತಮ ಪ್ರಭಾವ ಬೀರುವಂತಹ ಪೌಷ್ಟಿಕಾಂಶಗಳು ಇರುವುದರಿಂದ ಆರೋಗ್ಯದಲ್ಲಿ ಧನಾತ್ಮಕ ಬದಲಾವಣೆಯನ್ನು ಉಂಟುಮಾಡುವುದು. ಇದನ್ನು ಎಲ್ಲಾ ವಯೋಮಾನದವರು ಸೇವಿಸಬಹುದು.

ಸಾಮಾನ್ಯವಾಗಿ ಬಾದಾಮಿಯನ್ನು ವಿವಿಧ ಬಗೆಯಲ್ಲಿ ಸೇವಿಸಲಾಗುವುದು. ತಜ್ಞರ ಪ್ರಕಾರ ಬಾದಾಮಿ ಸಮೃದ್ಧವಾದ ನಾರಿನಂಶ ಹಾಗೂ ಪೋಷಕಾಂಶಗಳಿಂದ ಕೂಡಿದೆ. ಇದನ್ನು ಗಣನೀಯವಾಗಿ ಆಹಾರದಲ್ಲಿ ಸೇರಿಸಿಕೊಂಡರೆ ವ್ಯಕ್ತಿಯ ಆರೋಗ್ಯ ಉತ್ತಮ ರೀತಿಯಲ್ಲಿ ಇರುತ್ತದೆ. ಬೆರಳೆಣಿಕೆಯ ಬಾದಾಮಿ (ಸರಿಸುಮಾರು 28 ಗ್ರಾಂ) ಬಾದಾಮಿಯನ್ನು ಸೇವಿಸಿದರೆ ಎಷ್ಟು ಪ್ರಮಾಣದ ಪೋಷಕಾಂಶ ದೊರೆಯುವುದು ಎಂದು ಪರಿಶೀಲಿಸಿ.

ನಿಯಮಿತವಾಗಿ ಅಥವಾ ಗಣನೀಯವಾಗಿ ಬಾದಾಮಿಯನ್ನು ಸವಿಯುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿ ಇಡಬಹುದು. ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್ ಹೊಂದಿರುವಂತಹ ವ್ಯಕ್ತಿಗಳು ಇದನ್ನು ಗಣನೀಯವಾಗಿ ಸೇವಿಸಬಹುದು.

ಕೆಲವು ಅಧ್ಯಯನಗಳ ಪ್ರಕಾರ ಬಾದಾಮಿ ದೇಹದಲ್ಲಿನ ಎಲ್‍ಡಿಎಲ್ (ಕೆಟ್ಟ ಕೊಲೆಸ್ಟ್ರಾಲ್) ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ವಿಟಮಿನ್ ಇ, ಮ್ಯಾಗ್ನಿಸಿಯಮ್ ಮತ್ತು ಪೊಟ್ಯಾಸಿಯಮ್ ಅನ್ನು ತುಂಬಿರುತ್ತದೆ. ಇವು ರಕ್ತದಲ್ಲಿ ಇರುವ ವಿಷಕಾರಿ ಹಾಗೂ ಅಪಾಯಕಾರಿ ಕೊಬ್ಬುಗಳನ್ನು ಕರಗಿಸುತ್ತವೆ. ಅಪಧಮನಿ ಮತ್ತು ರಕ್ತನಾಳಗಳ ಮೂಲಕ ರಕ್ತದ ಹರಿವನ್ನು ಉತ್ತೇಜಿಸುವುದರ ಮೂಲಕ ಆರೋಗ್ಯಕರ ರಕ್ತ ಸಂಚಾರಕ್ಕೆ ಸಹಾಯ ಮಾಡುವುದು.

ಡೈರಿ ಉತ್ಪನ್ನ ಮತ್ತು ಹಾಲನ್ನು ಬಳಸದೆ ಇರುವವರಲ್ಲಿ ಕ್ಯಾಲ್ಸಿಯಮ್ ಕೊರತೆ ಉಂಟಾಗುವುದು. ಅಂತಹವರು ನೈಸರ್ಗಿಕ ಉತ್ಪನ್ನವಾದ ಬಾದಾಮಿ ಮತ್ತು ಬಾದಾಮಿ ಹಾಲನ್ನು ಹೊಂದುವುದರ ಮೂಲಕ ಕ್ಯಾಲ್ಸಿಯಮ್ ಕೊರತೆಯನ್ನು ನೀಗಿಸಬಹುದು.

ಗಣನೀಯವಾಗಿ ಬಾದಾಮಿ ಹಾಲು ಅಥವಾ ಬಾದಾಮಿ ಸೇವಿಸುವುದರಿಂದ ಮೂಳೆಗಳು ಬಲವನ್ನು ಪಡೆದುಕೊಳ್ಳುತ್ತವೆ. ಜೊತೆಗೆ ಮೂಳೆ ಸವಕಳಿ, ಮುರಿತ, ಮೂಳೆ ಸಂಬಂಧಿ ಅನಾರೋಗ್ಯಗಳನ್ನು ಸುಲಭವಾಗಿ ತಡೆಯಬಹುದು.

ಕೆಲವು ಅಧ್ಯಯನಗಳ ಪ್ರಕಾರ ಬಾದಾಮಿ ದೇಹದಲ್ಲಿನ ಎಲ್‍ಡಿಎಲ್ (ಕೆಟ್ಟ ಕೊಲೆಸ್ಟ್ರಾಲ್) ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ವಿಟಮಿನ್ ಇ, ಮ್ಯಾಗ್ನಿಸಿಯಮ್ ಮತ್ತು ಪೊಟ್ಯಾಸಿಯಮ್ ಅನ್ನು ತುಂಬಿರುತ್ತದೆ.

ಈ ಹಣ್ಣು ಅತಿ ಹೆಚ್ಚು ಕ್ಯಾನ್ಸರ್ ವಿರೋಧಿ ಗುಣ ಹೊಂದಿದೆ

Follow Us on :-