ಡ್ರ್ಯಾಗನ್ ಫ್ರೂಟ್ ಈ ಹಣ್ಣಿನ ಬಗ್ಗೆ ಬಗ್ಗೆ ಹೆಚ್ಚಿನವರಿಗೆ ಮಾಹಿತಿ ಇರಲಿಕ್ಕಿಲ್ಲ. ಇದು ಹೆಚ್ಚಾಗಿ ಮರುಭೂಮಿ ದೇಶದಲ್ಲಿ ಬೆಳೆಯಲಾಗುವ ಒಂದು ಹಣ್ಣಾಗಿದೆ. ಸಾಮಾನ್ಯ ಹಣ್ಣಿಗಿಂತ ಕೊಂಚ ದುಬಾರಿ ಬೆಲೆಯ ಈ ಹಣ್ಣು ತಿನ್ನಲು ಬಲು ರುಚಿ ಜೊತೆಗೆ ಇದರಿಂದ ದೊರಕುವ ಲಾಭಗಳು ಕೂಡ ಬಹಳ ಇದೆ. ನೋಡಲು ಮುಳ್ಳು ಮುಳ್ಳಿನಂತೆ ಇರುವ ಈ ಹಣ್ಣಿನ ಒಳಗಡೆ ಇರುವ ತಿರುಳನ್ನು ತಿನ್ನಬೇಕು. ಈ ಹಣ್ಣನ್ನು ಎರಡು ಭಾಗ ಮಾಡಿದರೆ ಒಳಗಡೆ ತಿರುಳು ನೋಡಲು ಬಲು ಚಂದ ಕಾಣಿಸುತ್ತದೆ. ನೋಡೋಕೆ ಮಾತ್ರವಲ್ಲ ಇದು ತಿನ್ನಲು ಸಹ ಸಖತ್ ಟೇಸ್ಟಿಆಗಿರುತ್ತದೆ.
photo credit social media