ಕೊತ್ತಂಬರಿ ಸೊಪ್ಪು ಬೆಳೆಯಲು ಸುಲಭ ಟ್ರಿಕ್ಸ್

ನಮ್ಮ ಬಾಲ್ಕನಿಯಲ್ಲೇ ಒಂದು ಪಾಟ್ ಇಟ್ಟುಕೊಂಡು ಬೆಳೆಯಬಹುದಾದ ಸೊಪ್ಪು ಎಂದರೆ ಕೊತ್ತಂಬರಿ ಸೊಪ್ಪು. ಸುಲಭವಾಗಿ ಕೊತ್ತಂಬರಿ ಸೊಪ್ಪನ್ನು ಬೆಳೆಯಬಹುದು. ಇದಕ್ಕೆ ಹೆಚ್ಚಿನ ಆರೈಕೆ ಬೇಕಾಗಿಲ್ಲ. ಕೊತ್ತಂಬರಿ ಸೊಪ್ಪು ಸಮೃದ್ಧವಾಗಿ ಬೆಳೆಸಲು ಇಲ್ಲಿದೆ ಟ್ರಿಕ್ಸ್.

Photo Credit: Social Media

ಗುಣಮಟ್ಟದ ಒಂದು ಮುಷ್ಟಿಯಷ್ಟು ಧನಿಯಾ ಕಾಳುಗಳನ್ನು ತೆಗೆದುಕೊಳ್ಳಿ.

ಇದನ್ನು ಒಂದು ಕಲ್ಲಿನಿಂದ ಮೃದುವಾಗಿ ಅರೆದು ತರಿ ತರಿಯಾಗಿ ಪುಡಿ ಮಾಡಿ

ಈ ಕಾಳುಗಳನ್ನು ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ರಾತ್ರಿಯಿಡೀ ನೆನೆ ಹಾಕಿ

ಒಂದು ಪಾಟ್ ನಲ್ಲಿ ಅರ್ಧದಷ್ಟು ಮಣ್ಣು ಹಾಕಿ ಅದಕ್ಕೆ ನೀರು ಹಾಕಿ ಮಣ್ಣು ಹದ ಮಾಡಿ

ಇದಕ್ಕೆ ನೆನೆಸಿದ ಧನಿಯಾ ಕಾಳುಗಳನ್ನು ಮೇಲಿನಿಂದ ಉದುರಿಸಿ ಸ್ವಲ್ಪವೇ ನೀರು ಚಿಮುಕಿಸಿ

ಬಳಿಕ ಇದರ ಮೇಲೆ ಇನ್ನೊಂದು ತೆಳುವಾದ ಪದರದಂತೆ ಮಣ್ಣು ಹಾಕಿ ಅದರ ಮೇಲೆ ನೀರು ಚಿಮುಕಿಸಿ

ಸುಮಾರು ಐದೇ ದಿನದಲ್ಲಿ ಧನಿಯಾ ಕಾಳುಗಳನ್ನು ಮೊಳಕೆ ಬಂದು ಸೊಪ್ಪು ಬರುವುದನ್ನು ನೋಡಬಹುದು

ಒಣ ಖರ್ಜೂರವನ್ನು ನೆನೆಸಿ ತಿನ್ನುವುದರ ಲಾಭ ತಿಳಿಯಿರಿ

Follow Us on :-