ಸ್ತನ ಕ್ಯಾನ್ಸರ್ ಕಾರಣಗಳು ಮತ್ತು ಲಕ್ಷಣಗಳು

ಇತ್ತೀಚೆಗಿನ ದಿನಗಳಲ್ಲಿ ಭಾರತೀಯ ಮಹಿಳೆಯರಲ್ಲೂ ಸ್ತನ ಕ್ಯಾನ್ಸರ್ ಪ್ರಕರಣ ಹೆಚ್ಚಾಗಿ ಕಂಡುಬರುತ್ತಿದೆ. ಇತ್ತೀಚೆಗೆ ನಟಿ ಹೀನಾ ಖಾನ್ ತಮಗೆ ಸ್ತನ ಕ್ಯಾನ್ಸರ್ ಇರುವುದಾಗಿ ಹೇಳಿಕೊಂಡಿದ್ದರು. ಸ್ತನ ಕ್ಯಾನ್ಸರ್ ನ ಕಾರಣಗಳು ಮತ್ತು ಲಕ್ಷಣಗಳು ಏನೆಂದು ತಿಳಿಯೋಣ.

Photo Credit: Social Media

ಸ್ತನದ ಕೆಲವೊಂದು ಭಾಗ ಅಥವಾ ಸಂಪೂರ್ಣವಾಗಿ ಊದಿಕೊಳ್ಳುವುದು ಅಥವಾ ಗಟ್ಟಿಯಾದಂತೆನಿಸುವುದು

ಎದೆಯಲ್ಲಿ ಕೆಂಪು ಬಣ್ಣದ ದದ್ದು ಅಥವಾ ರಾಶಸ್ ನಂತಹ ಲಕ್ಷಣಗಳು ಕಂಡುಬರಬಹುದು

ಮೊಲೆ ತೊಟ್ಟಿನ ಭಾಗ ಹಿಂದೆ ಸರಿದಂತಾಗುವುದು ಸ್ತನ ಕ್ಯಾನ್ಸರ್ ನ ಲಕ್ಷಣಗಳಲ್ಲೊಂದು

ಮೊಲೆ ತೊಟ್ಟಿನಲ್ಲಿ ಅಸಹಜ ಸ್ರಾವ ಅಥವಾ ಒಂದು ರೀತಿಯ ನೋವು ಕಾಣಿಸಿಕೊಳ್ಳಬಹುದು

ಸ್ತನ ಕ್ಯಾನ್ಸರ್ ಗೆ ಸೂಕ್ತ ಕಾರಣವೇನೆಂದು ಇನ್ನೂ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ

ಆದರೆ ಜೀವನ ಶೈಲಿ, ಹಾರ್ಮೋನ್ ಬದಲಾವಣೆಯಿಂದಾಗಿ ಸ್ತನ ಕ್ಯಾನ್ಸರ್ ಉಂಟಾಗಬಹುದು

ಲಕ್ಷಣಗಳು ಕಂಡುಬಂದರೆ ತಡಮಾಡದೇ ತಜ್ಞ ವೈದ್ಯರನ್ನು ಕಂಡು ಆರಂಭದಲ್ಲೇ ಚಿಕಿತ್ಸೆ ಪಡೆದುಕೊಳ್ಳಿ.

ಅತಿಯಾಗಿ ತಿನ್ನುವುದರ ಅಡ್ಡಪರಿಣಾಮಗಳೇನು

Follow Us on :-