ಹುಳಿಯಾದ ಮೊಸರು ಸೇವನೆ ಮಾಡಬಹುದೇ

ಮೊಸರು ಆರೋಗ್ಯಕ್ಕೆ ಉತ್ತಮವೇನೋ ಹೌದು. ಆದರೆ ಎರಡು ದಿನ ಹಾಗೆಯೇ ಇಟ್ಟು ಸೇವಿಸುವಾಗ ಮೊಸರು ಹುಳಿಯಾಗಬಹುದು. ಇಂತಹ ಮೊಸರನ್ನು ಸೇವಿಸಬಹುದೇ ಎಂಬ ಅನುಮಾನ ಕೆಲವರಿಗಿದೆ. ಹುಳಿ ಮೊಸರು ಯಾವಾಗ ಸೇವನೆಗೆ ಯೋಗ್ಯವಲ್ಲ ಮತ್ತು ಯೋಗ್ಯ ರೀತಿಯಲ್ಲಿ ಸೇವಿಸಲು ಟಿಪ್ಸ್ ಇಲ್ಲಿದೆ.

Photo Credit: Social Media

ಮೊಸರನ್ನು ಸೂಕ್ತ ರೀತಿಯಲ್ಲಿ ಇಟ್ಟುಕೊಂಡರೆ ಹುಳಿಯಾಗಿದ್ದರೂ ಸೇವನೆಗೆ ಯೋಗ್ಯವಾಗಿರುತ್ತದೆ

ಮೊಸರನ್ನು ಫ್ರಿಡ್ಜ್ ನಲ್ಲಿಟ್ಟು ಹುಳಿಯಾಗದಂತೆ ನೋಡಿಕೊಂಡು ಸೇವಿಸಿದರೆ ಉತ್ತಮ

ಮೊಸರಿನ ಪರಿಮಳ ಮತ್ತು ಮೇಲ್ಪದರ ಬಣ್ಣ ಬದಲಾದಂತೆ ಅನಿಸಿದರೆ ಅಂತಹ ಮೊಸರು ಸೇವಿಸಬಾರದು

ಶುದ್ಧವಾದ ಪಾತ್ರೆಯಲ್ಲಿ ಮೊಸರನ್ನು ಸಂಗ್ರಹಿಸಿಟ್ಟುಕೊಂಡರೆ ಮಾತ್ರ ಸೇವನೆಗೆ ಯೋಗ್ಯವಾಗಿರುತ್ತದೆ

ಹುಳಿ ಮೊಸರನ್ನು ಸಕ್ಕರೆ, ಜೇನುತುಪ್ಪ ಅಥವಾ ಸೆರೆಲ್ಸ್ ಜೊತೆ ಬೆರೆಸಿ ಸೇವನೆ ಮಾಡಬಹುದು

ಹುಳಿ ಮೊಸರನ್ನು ರಾತ್ರಿ ಸೇವನೆ ಮಾಡದೇ ಹಗಲು ಮಾತ್ರ ಸೇವನೆ ಮಾಡುವುದು ಉತ್ತಮ

ಹುಳಿ ಮೊಸರಿನಲ್ಲಿರುವ ಬ್ಯಾಕ್ಟೀರಿಯಾ ನಮ್ಮ ಜೀರ್ಣಕ್ರಿಯೆ ಸುಧಾರಣೆಗೂ ಉತ್ತಮ

ಮಳೆಗಾಲದಲ್ಲಿ ನೀರಿಗೆ ಇದನ್ನು ಸೇರಿಸಿ ಸೇವಿಸಿ ನೋಡಿ

Follow Us on :-