ಮಳೆಗಾಲದಲ್ಲಿ ನೀರಿಗೆ ಇದನ್ನು ಸೇರಿಸಿ ಸೇವಿಸಿ ನೋಡಿ

ಮಳೆಗಾಲ ಬಂತೆಂದರೆ ನಮಗೆ ಸೋಂಕು ರೋಗಗಳ ಭಯ ಶುರುವಾಗುತ್ತದೆ. ಮಳೆಗಾಲದಲ್ಲಿ ರೋಗಗಳಿಂದ ದೇಹ ರಕ್ಷಿಸಿಕೊಳ್ಳಬೇಕೆಂದರೆ ರೋಗ ನಿರೋಧಕ ಶಕ್ತಿ ಚೆನ್ನಾಗಿರಬೇಕು. ಇದಕ್ಕಾಗಿ ಪ್ರತಿನಿತ್ಯ ನೀರಿಗೆ ಕೊಂಚ ಅರಶಿನ ಸೇರಿಸಿ ಸೇವಿಸಿ.

Photo Credit: Social Media

ಅರಶಿನದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿದ್ದು, ನೀರಿನ ಜೊತೆ ಸೇರಿಸಿಕೊಂಡು ಕುಡಿದರೆ ರೋಗ ಬಾರದು

ಪ್ರತಿನಿತ್ಯ ಹದ ಬಿಸಿ ನೀರಿಗೆ ಕೊಂಚ ಅರಶಿನ ಸೇರಿಸಿ ಕುಡಿಯುವುದರಿಂದ ತೂಕ ಇಳಿಕೆಗೆ ಸಹಕಾರಿ

ಅರಶಿನ ಮತ್ತು ನೀರು ಬೆರೆಸಿ ಸೇವಿಸಿದರೆ ದೇಹದಲ್ಲಿ ಉರಿಯೂತವಾಗದಂತೆ ಕಾಪಾಡುತ್ತದೆ

ಮಳೆಗಾಲದಲ್ಲಿ ಚರ್ಮ ಅಲರ್ಜಿಯಾಗದಂತೆ ಸಂರಕ್ಷಿಸಲು ಅರಶಿನ ಹಾಕಿದ ನೀರು ಸೇವಿಸಿ

ಮಳೆಗಾಲದಲ್ಲಿ ಅನೇಕ ಸೋಂಕು ರೋಗಗಳಿಂದ ರಕ್ಷಿಸಿಕೊಳ್ಳಲು ಅರಶಿನ ನೀರು ಸೇವಿಸಬೇಕು

ಶೀತ ವಾತಾವರಣವಿರುವಾಗ ಕಾಡುವ ಸಂಧಿ ನೋವುಗಳಿಗೆ ಅರಶಿನ ಹಾಕಿದ ನೀರು ಸೂಕ್ತ

ನೆನಪಿರಲಿ, ಯಾವುದೇ ಮನೆ ಮದ್ದು ಮಾಡುವ ಮೊದಲು ತಜ್ಞ ವೈದ್ಯರ ಸಲಹೆ ಪಡೆಯಿರಿ.

ಮೆದುಳು ಚುರುಕಾಗಲು ಸರಳ ಉಪಾಯಗಳು

Follow Us on :-