ಇದರಲ್ಲಿ ಮೂರೂ ವಿಧಗಳಿವೆ ಪೇಪರ್ ಅವಲಕ್ಕಿ, ಮೀಡಿಯಂ ಅವಲಕ್ಕಿ, ದಪ್ಪ ಅವಲಕ್ಕಿ ಎಂದು ಕರೆಯುತ್ತಾರೆ. ಇದು ಭಾರತ ದೇಶದ ಕೆಲವು ಕಡೆ ದೊರೆಯುತ್ತದೆ. ಇದು ರೆಡಿ ಕುಕ್ ತರ, ನೀರಲ್ಲಿ ಹಾಕಿದರೆ ಮೆತ್ತಗಾಗುತ್ತದೆ. ಇದನ್ನು ಹಾಗೆಯೇ ತಿನ್ನಬಹುದು. ಇದನ್ನು ಬೇರೆ ಬೇರೆ ಊರುಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ.
photo credit social media
ಇದನ್ನು ಹಿಂದಿಯಲ್ಲಿ ಚಿವಡಾ , ಮರಾಠಿಯಲ್ಲಿ ಪೋಹಾ, ತೆಲುಗಿನಲ್ಲಿ ಅಟುಕುಲಾ, ಕನ್ನಡದಲ್ಲಿ ಅವಲಕ್ಕಿ , ತುಳುವಿನಲ್ಲಿ ಬಜಿಲ್, ತಮಿಳಿನಲ್ಲಿ ಅವಾಲ್ , ನೇಪಾಳದಲ್ಲಿ ಚಿವರಾ, ಬಿಹಾರದಲ್ಲಿ ಚೂಡ, ಬೆಂಗಾಲಿಯಲ್ಲಿ ಚಿರಾ , ಆಸ್ಸಾಂನಲ್ಲಿ ಸಿರಾ, ಗುಜರಾತಿನಲ್ಲಿ ಪಾವುನವ ಎಂದು ಕರೆಯುತ್ತಾರೆ.
ಇದನ್ನು ತಿಂಡಿಯಾಗಿ ತಿನ್ನುತ್ತಾರೆ. ಬೆಳಗಿನ ಉಪಹಾರವಾಗಿ ಅಲ್ಲದೆ ಇದರಿಂದ ಅನೇಕ ತಿಂಡಿಗಳ್ಳನ್ನು ಮಾಡಿ ತಿನ್ನುತ್ತಾರೆ. ಸಂಜೆ ಸಮಯದಲ್ಲು ತಿನ್ನುವ ತಿಂಡಿಯಾಗಿದೆ. ಇದರಿಂದ ಚಿವಡಾ ಪೋಹ, ಗೊಜ್ಜವಲ್ಲಕ್ಕಿ, ಅವಲಕ್ಕಿ ಚಿತ್ರಾನ್ನ ಮೊಸರವಲ್ಲಕ್ಕಿ, ಬಾತ್, ವಡೆ, ಟಿಕ್ಕಾ, ದೇವರಿಗೆ ಮಾಡುವ ಬೆಲ್ಲದ ಅವಲಕ್ಕಿ ಪ್ರಸಾದ ಹೀಗೆ ಹೇಳುತ್ತಾ ಹೋದರೆ ಅನೇಕ ವಿಧದ ತಿಂಡಿಗಳನ್ನ ಮಾಡಬಹುದು.
ತೂಕ ಇಳಿಸಲು ಉಪಯೋಗಿಸಬಹುದು. ಇದು ಕಡಿಮೆ ಕ್ಯಾಲೋರಿ ಹೊಂದಿರುವ ಆಹಾರ. ಇದನ್ನು ಸ್ವಲ್ಪ ತಿಂದರೂ ಹೊಟ್ಟೆ ಪೂರ್ತಿ ಆಗುತ್ತದೆ.
ಮುಟ್ಟು ಬೇಗ ಆಗಬೇಕೆಂದರೆ ಅವಲಕ್ಕಿ ತಿನ್ನಿ ಪಿರಿಯಡ್ಸ್ ಬೇಗ ಆಗುತ್ತದೆ.
ಬೆಳ್ತಿಗೆ ಅಕ್ಕಿಗಿಂತ ಇದು ಉತ್ತಮ. ಅಕ್ಕಿಗೆ ಪಾಲಿಶ್ ಮಾಡಲಾಗಿರುತ್ತದೆ. ಹಾಗಾಗಿ ಆದರಲ್ಲಿನ ನಾರಿನ ಅಂಶ ಕಡಿಮೆ ಆಗಿರುತ್ತದೆ. ಅವಲಕ್ಕಿ ಮಾಡುವ ವಿಧಾನ ಬೇರೆ. ಅದರಲ್ಲಿ ಶೇಕಡಾ 70 % ರಷ್ಟು ಕಾರ್ಬೋಹೈಡ್ರೇಡ್ , 30 % ಫ್ಯಾಟ್ ಇದೆ . ಹಾಗಾಗಿ ತೂಕ ಇಳಿಸಿ ಕೊಳ್ಳುವವರು ಇದರನ್ನು ಉಪಯೋಗಿಸಬಹುದು.
ಅವಲಕ್ಕಿಯನ್ನು ಸೂರ್ಯನ ಬೆಳಕಿನಲ್ಲಿ ಒಣಗಿಸುವುದರಿಂದ ವಿಟಮಿನ್ ಡಿ ಜೊತೆ , ಖನಿಜಾಂಶಗಳಿರುತ್ತವೆ. ಇದನ್ನು ಗರ್ಭಿಣಿಯರು , ಮಹಿಳೆಯರು ರಕ್ತ ಹೀನತೆಯಿಂದ ಬಳಲುವವರು ಪೋಹಾ ಮಾಡಿ ತಿಂದರೆ ಬಹಳ ಒಳ್ಳೆದು.
ಬೇಗ ಜೀರ್ಣವಾಗುವಂತ ಆಹಾರ ಹಾಗಾಗಿ ಮಲಬದ್ಧತೆ ಇರುವವರು ಮೊಸರವಲಕ್ಕಿ ಮಾಡಿ ತಿಂದರೆ ಬಹಳ ಒಳ್ಳೇದು.