ಚರ್ಮದ ರೋಗಕ್ಕೂ ಟೊಮೆಟೊ ಮನೆಮದ್ದು

ಚರ್ಮದ ರೋಗಕ್ಕೂ ಟೊಮೆಟೊ ಮನೆಮದ್ದು. ಹಣ್ಣಿನಲ್ಲಿರುವ ಲೈಕೋಪೀನ್ ಸೂರ್ಯನ ಹಾನಿಕಾರಕ, ಯುವಿ ಕಿರಣಗಳಿಂದ ಚರ್ಮವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಟೊಮೆಟೊ ರಸವನ್ನು ಚರ್ಮದ ಮೇಲೆ ಹಚ್ಚಿದರೆ, ಚರ್ಮದ ಹೊಳಪು ಕೂಡ ಹೆಚ್ಚಾಗುತ್ತದೆ. ಹಾಗೆಯೇ ತುಂಬಾ ಸಾಫ್ಟ್​ (ಮೃದು) ಆಗುತ್ತದೆ.

photo credit social media

ಟೊಮೆಟೊ ಆರೋಗ್ಯದ ಸಮಸ್ಯೆಗಳಿಗೆ ರಾಮಬಾಣ. ಟೊಮೆಟೊ ಅತ್ಯಂತ ಶಕ್ತಿಶಾಲಿ ಹಣ್ಣು ಕೂಡ ಹೌದು. ವಿಟಮಿನ್ಸ್​ ಮತ್ತು ಖನಿಜಗಳು ಅಡಗಿವೆ ಈ ಹಣ್ಣಿನಲ್ಲಿ. ಅದರಲ್ಲೂ ಟೊಮೆಟೊ ಈ ಐದು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ.

ಈ ಹಣ್ಣನ್ನು ಬೇಯಿಸಿ ಅಥವಾ ಹಸಿಯಾಗಿ ಸೇವಿಸಲೂಬಹುದು. ಟೊಮೆಟೊದಲ್ಲಿ ಎ, ಸಿ, ಕೆ, ಬಿ 1, ಬಿ 3, ಬಿ 5, ಬಿ 6 ಮತ್ತು ಬಿ 7 ವಿಟಮಿನ್​ಗಳಿದೆ. ಅಲ್ಲದೆ, ಪೊಟ್ಯಾಷಿಯಮ್, ಮೆಗ್ನೀಸಿಯಮ್, ಫೋಲೇಟ್, ಕಬ್ಬಿಣ, ಕ್ರೋಮಿಯಂ, ಸತು ಕೋಲೀನ್ ಮತ್ತು ರಂಜಕವನ್ನೂ ಸಹ ಒಳಗೊಂಡಿದೆ.

ಈ ಖನಿಜಗಳು ಮತ್ತು ಜೀವಸತ್ವಗಳು ಮನುಷ್ಯನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ವಿಶೇಷವಾಗಿ ಸಿಪ್ಪೆ ಸುಲಿದ ಟೊಮೆಟೊ ಹಣ್ಣು ತಿಂದರೆ, ದೇಹದ ಆರೋಗ್ಯ ಮತ್ತಷ್ಟು ವೃದ್ದಿಸುತ್ತದೆ. ಹಾಗಾದರೆ ಟೊಮೆಟೊ ಸೇವನೆ ಮಾಡುವುದರಿಂದ ಯಾವೆಲ್ಲಾ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ.

ಮಾರಕ ಕ್ಯಾನ್ಸರ್ ರೋಗ ತಡೆಗಟ್ಟಲು ಟೊಮೆಟೊ ಸಾಕಷ್ಟು ನೆರವಾಗುತ್ತದೆ. ಲೈಕೋಪೀನ್ ಎಂಬ ರಾಸಾಯನಿಕ ಅಂಶ ಹೊಂದಿರುವ ಟೊಮೆಟೊ, ಕ್ಯಾನ್ಸರ್ ಕೋಶಗಳ ಸರ್ವನಾಶಕ್ಕೆ ನೆರವಾಗುತ್ತದೆ. ಅಲ್ಲದೆ, ಬೀಟಾ ಕ್ಯಾರೋಟಿನ್ ಮತ್ತು ಲೈಕೋಪೀನ್ ಸಮೃದ್ಧವಾಗಿದೆ. ವಾರದಲ್ಲಿ ಕನಿಷ್ಠ ಹತ್ತಕ್ಕೂ ಹೆಚ್ಚು ಟೊಮೆಟೊ ಸೇವಿಸಿದರೆ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯ ಕಡಿಮೆ ಮಾಡಬಹುದು.

ಟೊಮೆಟೊ ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಯಲು ಕೆಲಸ ಮಾಡುತ್ತದೆ. ವಿಟಮಿನ್ ಸಿ, ಪೊಟ್ಯಾಷಿಯಂ, ಫೈಬರ್ ಮತ್ತು ಕೋಲೀನ್ ಸಮೃದ್ಧವಾಗಿದೆ. ದೊಡ್ಡ ಪ್ರಮಾಣದಲ್ಲಿ ಪೊಟ್ಯಾಷಿಯಂ ಪಡೆಯಲು ಬಯಸಿದರೆ, ಸಲಾಡ್ ರೂಪದಲ್ಲಿ ತಿಂದರೆ ಉತ್ತಮ. ದಿನಕ್ಕೆ 4039 ಮಿಲಿಗ್ರಾಂ ಪೊಟ್ಯಾಷಿಯಂ ಸೇವಿಸಿದವರಿಗೆ ಹೃದಯ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ ಎಂಬುದು ಸಂಶೋಧನಾ ವರದಿ.

ಟೊಮೆಟೊ ಗರ್ಭಿಣಿಯರಿಗೆ ಹೆಚ್ಚು ಅನುಕೂಲ. ಹಣ್ಣಿನಲ್ಲಿರುವ ಪೋಷಕಾಂಶಗಳು ತಾಯಿ ಮತ್ತು ಮಗು ಇಬ್ಬರಿಗೂ ಉಪಯುಕ್ತ. ಹಾಗಾಗಿ ಗರ್ಭಿಣಿಯರು ತಮ್ಮ ಆಹಾರದಲ್ಲಿ ಟೊಮೆಟೊವನ್ನು ಹೆಚ್ಚು ಬಳಿಸಿಕೊಳ್ಳಬೇಕು.

ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಕೂಡ ಟೊಮೆಟೊ ಸಹಾಯ ಮಾಡುತ್ತದೆ. ಹಣ್ಣಿನಲ್ಲಿ ವಿಟಮಿನ್ ಸಿ ಇರುವ ಕಾರಣ, ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಜೊತೆಗೆ ಒತ್ತಡದ ಹಾರ್ಮೋನು ಬೆಳವಣಿಗೆಯನ್ನೂ ನಿಯಂತ್ರಿಸುತ್ತದೆ.

ದಿನಕ್ಕೆ 4039 ಮಿಲಿಗ್ರಾಂ ಪೊಟ್ಯಾಷಿಯಂ ಸೇವಿಸಿದವರಿಗೆ ಹೃದಯ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ ಎಂಬುದು ಸಂಶೋಧನಾ ವರದಿ.

ಅಧಿಕ ಕೊಲೆಸ್ಟ್ರಾಲ್ ಮಟ್ಟ ನಿವಾರಣೆಗೆ ಶುಂಠಿ ರಾಮಬಾಣ

Follow Us on :-