ನಿಮಗೆ ಕೆಲಸ ಮಾಡಲು ತುಂಬಾ ಉದಾಸೀನವಾಗುತ್ತಿದೆಯಾ? ಈ ಹಣ್ಣು ಸೇವಿಸಿ

ನಿಮಗೆ ಕೆಲಸ ಮಾಡಲು ತುಂಬಾ ಉದಾಸೀನವಾಗುತ್ತಿದೆಯಾ? ಹಾಗಾದರೆ ನೀವು ಬೆಳಗ್ಗೆ ಉಪಾಹಾರಕ್ಕೆ ಎರಡು ಬಾಳೆಹಣ್ಣುಗಳನ್ನು ಸೇವಿಸಿ ಮತ್ತು ನಿಮ್ಮಲ್ಲಿ ಶಕ್ತಿ ಹೇಗೆ ಬರುವುದು ನೋಡಿ. ಇದರಲ್ಲಿರುವಂತಹ ಪೊಟಾಶಿಯಂ ದೇಹದಲ್ಲಿ ಶಕ್ತಿ ನಿರ್ಮಾಣ ಮಾಡಲು ನೆರವಾಗುವುದು. ಬಾಳೆಹಣ್ಣು ವ್ಯಾಯಾಮಕ್ಕೆ ಮೊದಲು ಮತ್ತು ಬಳಿಕ ಒಳ್ಳೆಯ ಆಹಾರವಾಗಿದೆ.

photo credit social media

ಬೆಳಗ್ಗಿನ ಉಪಾಹಾರಕ್ಕೆ ನೀವು ಸೀರಲ್, ದೋಸೆ ಅಥವಾ ಸ್ಮೂಥಿ ಸೇವಿಸಬಹುದು. ಈ ವೇಳೆ ನಿಮಗೆ ಬೇಕಾಗಿರುವ ಪೋಷಕಾಂಶಗಳು ಲಭ್ಯವಾಗುವುದು. ಇದರೊಂದಿಗೆ ನೀವು ಬಾಳೆಹಣ್ಣನ್ನು ಸೇರಿಸಿಕೊಂಡರೆ ಅದರಲ್ಲಿರುವ ಪೋಷಕಾಂಶಗಳು ನಿಮ್ಮ ದೇಹಕ್ಕೆ ಮತ್ತಷ್ಟು ಬಲ ನೀಡುವುದು.

ಬಾಳೆಹಣ್ಣು ದೇಹಕ್ಕೆ ಶಕ್ತಿ ನೀಡುವುದು ಎಂದು ಹಿಂದಿನಿಂದಲೂ ಹೇಳುತ್ತಾ ಬರಲಾಗಿದೆ. ಈ ಲೇಖನದಲ್ಲಿ ದಿನಕ್ಕೆ ಎರಡು ಬಾಳೆಹಣ್ಣುಗಳನ್ನು ತಿಂದರೆ ಅದರಿಂದ ಆಗುವ ಲಾಭಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಬಾಳೆಹಣ್ಣು ತುಂಬಾ ರುಚಿಕರವಾದ ಹಣ್ಣು ಮತ್ತು ಇದರಿಂದ ದೇಹಕ್ಕೆ ಹಲವಾರು ರೀತಿಯ ಪೋಷಕಾಂಶಗಳು ಸಿಗುವುದು.

ಬಾಳೆಹಣ್ಣಿನಲ್ಲಿ 110 ಕ್ಯಾಲರಿ, 5 ಗ್ರಾಂ ಕೊಬ್ಬು, 27 ಗ್ರಾಂ ಕಾರ್ಬ್ರೋಹೈಡ್ರೇಟ್ಸ್, 3 ಗ್ರಾಂ ನಾರಿನಾಂಶ, 14 ಗ್ರಾಂ ಸಕ್ಕರೆ, ಶೇ.25ರಷ್ಟು ವಿಟಮಿನ್ ಬಿ6, 1 ಗ್ರಾಂ ಪ್ರೋಟೀನ್, ಶೇ. 16ರಷ್ಟು ಮ್ಯಾಂಗನೀಸ್, ಶೇ.14ರಷ್ಟು ವಿಟಮಿನ್ ಸಿ, ಶೇ. 12ರಷ್ಟು ನಾರಿನಾಂಶ, ಶೇ. 10ರಷ್ಟು ಬಿಯೊಟಿನ್, ಶೇ. 10ರಷ್ಟು ತಾಮ್ರ ಮತ್ತು ಶೇ.8ರಷ್ಟು ಮ್ಯಾಂಗನೀಸ್ ಇದೆ.

ರಕ್ತದೊತ್ತಡ ಕಡಿಮೆ ಮಾಡುವುದು ನೀವು ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿದ್ದರೆ ಆಗ ದಿನಕ್ಕೆ ಎರಡು ಬಾಳೆಹಣ್ಣು ಸೇವಿಸಿದರೆ ರಕ್ತದೊತ್ತಡವು ಸಾಮಾನ್ಯಕ್ಕೆ ಬರುವುದು. ಇದರಲ್ಲಿ 420 ಗ್ರಾಂನಷ್ಟು ಪೊಟಾಶಿಯಂ ಇರುವುದೇ ಇದಕ್ಕೆ ಕಾರಣ. ಉಪ್ಪಿನ ನಕಾರಾತ್ಮಕ ಪರಿಣಾಮವನ್ನು ಪೊಟಾಶಿಯಂ ಸರಿದೂಗಿಸುವುದು. ಇದರಿಂದ ರಕ್ತದೊತ್ತಡ ಸಮತೋಲನಕ್ಕೆ ಬರುವುದು.

ಜೀರ್ಣಕ್ರಿಯೆ ಸುಧಾರಣೆ : ಬಾಳೆಹಣ್ಣು ಜೀರ್ಣಕ್ರಿಯೆ ವೃದ್ಧಿಸುವುದು. ಇದರಲ್ಲಿ ಉನ್ನತ ಮಟ್ಟದ ನಿರೋಧಕ ಪಿಷ್ಠವಿದ್ದು, ಇದು ಸುಲಭವಾಗಿ ಜೀರ್ಣವಾಗಲ್ಲ ಮತ್ತು ದೊಡ್ಡ ಕರುಳಿಗೆ ಇದು ಸಾಗಿ ಆರೋಗ್ಯಕರ ಬ್ಯಾಕ್ಟೀರಿಯಾ ಬೆಳವಣಿಗೆ ಮಾಡುವುದು. ಅಜೀರ್ಣ ಅಥವಾ ಎದೆಯುರಿ ಸಮಸ್ಯೆಯಿಂದ ಬಳಲುತ್ತಿದ್ದರೆ ಆಗ ನೀವು ಬಾಳೆಹಣ್ಣು ಸೇವಿಸಿ. ಭೇದಿ ಬಳಿಕ ನೀವು ಬಾಳೆಹಣ್ಣು ತಿನ್ನಬಹುದು. ಯಾಕೆಂದರೆ ಇದು ದೇಹದಲ್ಲಿ ನಾಶವಾಗಿರುವ ಖನಿಜಾಂಶವನ್ನು ಮರಳಿ ನಿರ್ಮಿಸುವುದು.

ನೀವು ದಿನಕ್ಕೆರಡು ಸಣ್ಣ ಬಾಳೆಹಣ್ಣು ಸೇವನೆ ಮಾಡಿದರೆ ಆಗ ಅದು ತೂಕ ಕಲೆದುಕೊಳ್ಳಲು ಸಹಕಾರಿಯಾಗಲಿದೆ. ಇದರಲ್ಲಿರುವಂತಹ ಉನ್ನತ ಮಟ್ಟದ ನಾರಿನಾಂಶವು ದೀರ್ಘಕಾಲದ ತನಕ ಹೊಟ್ಟೆ ತುಂಬಿದಂತೆ ಮಾಡುವುದು. ಇದರಲ್ಲಿರುವ ನಿರೋಧಕ ಪಿಷ್ಠವು ಹಸಿವು ತಗ್ಗಿಸುವುದು ಮತ್ತು ತೂಕ ಹೆಚ್ಚಾಗದಂತೆ ತಡೆಯುವುದು. ದಿನದ ಯಾವ ಸಮಯದಲ್ಲಿ ನೀವು ಬಾಳೆಹಣ್ಣು ತಿನ್ನುತ್ತೀರಿ ಎನ್ನುವುದರ ಮೇಲೆ ತೂಕ ಕಳೆದುಕೊಳ್ಳುವುದು ನಿರ್ಧಾರವಾಗುತ್ತದೆ.

ರಕ್ತದಲ್ಲಿ ಕಬ್ಬಿನಾಂಶ ಕೊರತೆಯಿಂದ ಆಗುವ ರಕ್ತಹೀನತೆಯಿಂದ ಬಳಲುವ ಸಮಸ್ಯೆಯನ್ನು ಬಾಳೆಹಣ್ಣು ಕಡಿಮೆ ಮಾಡುವುದು. ಹಿಮೋಗ್ಲೋಬಿನ್ ಕಡಿಮೆ ಇರುವುದರಿಂದ ನಿಶ್ಯಕ್ತಿ ಮತ್ತು ಆಯಾಸವಾಗುವುದು. ದಿನಕ್ಕೆ ಎರಡು ಬಾಳೆಹಣ್ಣು ಸೇವನೆ ಮಾಡಿದರೆ ಕಬ್ಬಿನಾಂಶವು ಕೆಂಪು ರಕ್ತದ ಕಣಗಳನ್ನು ಉತ್ಪತ್ತಿ ಮಾಡಲು ಉತ್ತೇಜಿಸುವುದು.

​ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಬಾದಾಮಿ ಸೇವಿಸಿ

Follow Us on :-