Webdunia - Bharat's app for daily news and videos

Install App

ಅದೃಷ್ಟ ತರುವ ಸಸ್ಯಗಳು

Webdunia
ಶುಕ್ರವಾರ, 7 ಫೆಬ್ರವರಿ 2014 (11:30 IST)
PR
ಫೆಂಗ್‌ಶುಯಿ ದೃಷ್ಟಿಕೋನದಿಂದ ಸಸ್ಯಗಳು ಶುಭಕರವೆನಿಸಿವೆ. ಮನೆಯಲ್ಲಿ ಸಸ್ಯಗಳನ್ನು ನೆಡುವುದು ಸದಾ ಒಳ್ಳೆಯದು. ಕಚೇರಿಯಲ್ಲಿ ಸಸ್ಯಗಳಿದ್ದರೆ ಅವು ನಿಮ್ಮ ವೃತ್ತಿಜೀವನದಲ್ಲೂ ಅದೃಷ್ಟ ತರಬಲ್ಲದು. ಕಚೇರಿಯ ಪೂರ್ವ, ದಕ್ಷಿಣ ಮತ್ತು ಆಗ್ನೇಯ ಮ‌ೂಲೆಗಳಲ್ಲಿ ಗರಿಷ್ಠ ಅದೃಷ್ಟ ಗಳಿಸಲು ಗಿಡಗಳನ್ನು ಇರಿಸಿ. ನೀವು ವಿವಾಹಿತ ದಂಪತಿಯಾಗಿದ್ದು, ಮಕ್ಕಳನ್ನು ಬಯಸಿದ್ದರೆ ಮಲಗುವ ಕೋಣೆಯಲ್ಲಿ ಹೂವುಗಳನ್ನು ಇರಿಸಬೇಡಿ.

ದಾಳಿಂಬೆ ಹಣ್ಣುಗಳು
PR

ಬದಲಿಗೆ ಹಣ್ಣುಗಳ ಬುಟ್ಟಿಯನ್ನು ಮಲಗುವ ಕೋಣೆಯಲ್ಲಿಡಿ. ಹಣ್ಣುಗಳು ವಿಶೇಷವಾಗಿ ದಾಳಿಂಬೆ ಹಣ್ಣುಗಳು ಸಂತಾನ ಫಲದ ಸಂಕೇತವಾಗಿದೆ. ಮನೆಯೊಳಗೆ ಮುಳ್ಳಿನ ಗಿಡಗಳನ್ನು ಇರಿಸಬೇಡಿ. ಮುಳ್ಳಿನ ಗಿಡಗಳು ರಕ್ಷಣಾತ್ಮಕ ಕವಚವಾಗಲಿದ್ದು, ಮನೆಯ ಹೊರಕ್ಕೆ ಇರಿಸಬಹುದು. ಮುಂಬಾಗಿಲಿಗೆ ಅತೀ ಸಮೀಪದಲ್ಲಿ ಇರಿಸಬೇಡಿ. ಮುಂಬಾಗಿಲಿನಿಂದ ದೂರದಲ್ಲಿ ಬಾಲ್ಕನಿ ಬಳಿ ಇರಿಸಿ.

ಮನೆಯ ಹೊರಗೆ ಅಥವಾ ಒಳಗೆ ಬೋನ್ಸಾಯಿ ಗಿಡಗಳನ್ನು ಇರಿಸಬೇಡಿ. ಅವು ಕುಂಠಿತ ಬೆಳವಣಿಗೆಯನ್ನು ತೋರಿಸುತ್ತದೆ. ನಿಮ್ಮ ಸಸ್ಯಗಳನ್ನು ಆಗಾಗ್ಗೆ ಟ್ರಿಮ್ ಮಾಡುತ್ತಿರಿ. ಅತಿಯಾಗಿ ಬೆಳೆದ ಸಸ್ಯಗಳು ಕೆಟ್ಟಶಕ್ತಿಗೆ ಉತ್ತೇಜಿಸುತ್ತದೆ. ಇದೇ ರೀತಿ ನಿಮ್ಮ ತೋಟದಲ್ಲಿ ನಿಯಮಿತವಾಗಿ ಮರಗಳ ಅನವಶ್ಯಕ ಭಾಗ ಕತ್ತರಿಸಿ ಓರಣಗೊಳಿಸಿ. ನಿಮ್ಮ ಮನೆಯನ್ನು ಮರಗಳು ಆವರಿಸದಂತೆ, ಅದರ ನೆರಳು ಬೀಳದಂತೆ ನೋಡಿಕೊಳ್ಳಿ. ನಿಮ್ಮ ಕೋಣೆಯಲ್ಲಿ ತಾಜಾ ಹೂವುಗಳನ್ನು ಕಾಯಮ್ಮಾಗಿ ಇರಿಸಿ. ಆದರೆ ಹೂವು ಬಾಡಿದರೆ ಬಿಸಾಕಿ. ಒಣಗಿದ ಹೂವುಗಳನ್ನು ಮನೆಯಲ್ಲಿ ಇಡಬೇಡಿ. ಅದರಿಂದ ದುರಾದೃಷ್ಟ ತರುತ್ತದೆಂದು ಹೇಳಲಾಗಿದೆ.

ಕೃತಕ ಹೂವುಗಳು ಆದ್ಯತೆಯ ಆಯ್ಕೆಯಾಗಿದ್ದು, ಅವು ಅದೃಷ್ಟ ತರುತ್ತದೆಂದು ಭಾವಿಸಲಾಗಿದೆ.ಯಾವುದೇ ಹೂವು, ಸಸ್ಯಗಳು ಮತ್ತು ಯಾವುದೇ ಶುಭಕರ ಫೆಂಗ್ ಶುಯಿ ಸಂಕೇತವನ್ನು ಸ್ನಾನದ ಕೋಣೆಯಲ್ಲಿ ಇರಿಸಬೇಡಿ. ಅದೃಷ್ಟವು ದುರಾದೃಷ್ಟಕ್ಕೆ ತಿರುಗಬಹುದು. ಅಂಗಡಿಗಳ ದ್ವಾರದಲ್ಲಿ ನಿಂಬೆಹಣ್ಣುಗಳನ್ನು ತೂಗುಹಾಕಿರುವುದನ್ನು ನೀವು ನೋಡಿರಬಹುದು. ಹಿಂದು ನಂಬಿಕೆಯ ಪ್ರಕಾರ ಅವು ಕೆಟ್ಟ ದೃಷ್ಟಿಯನ್ನು ನಿವಾರಿಸುತ್ತದೆ. ಇದೇ ರೀತಿ ಕಿತ್ತಲೆ ಮತ್ತು ನಿಂಬೆಹಣ್ಣು ಅದೃಷ್ಟದ ಶಕ್ತಿಶಾಲಿ ಸಂಕೇತವೆಂದು ನಂಬಲಾಗಿದ್ದು ಮನೆಗೆ ಸಂಪದಭಿವೃದ್ಧಿಯನ್ನು ತರುತ್ತದೆ. ಅವುಗಳನ್ನು ಮನೆಯ ಪ್ರವೇಶದ್ವಾರದಲ್ಲಿ ಇರಿಸಬೇಕು. ಇದಕ್ಕಿಂತ ಮುಂಚೆ ಒಂದು ಮಾತನ್ನು ಸ್ಪಷ್ಟಪಡಿಸಬೇಕಾಗಿದೆ. ಶ್ರಮದ ದುಡಿಮೆಗೆ ಪರ್ಯಾಯ ಯಾವುದೂ ಇಲ್ಲ. ಬುದ್ಧಿವಂತಿಕೆ ಶೇ.99ರಷ್ಟು ಬೆವರುಹರಿಸುವುದರ ಫಲ ಮತ್ತು ಸ್ಫೂರ್ತಿ ಶೇ.1ರಷ್ಟು ಇರುತ್ತದೆ.

ಲೇಡಿ ಲಕ್
PR
PR

ಆದರೆ ಕೆಲವೊಮ್ಮೆ ಅತ್ಯಂತ ಶ್ರಮಪಡುವ ಜನರು ಕೂಡ ದುರಾದೃಷ್ಟದ ಕಾರಣದಿಂದ ಏಳಿಗೆ ಹೊಂದುವುದಿಲ್ಲ. ಲೇಡಿ ಲಕ್ ನಿಮ್ಮ ಪಥದಲ್ಲಿ ನಗೆಬೀರಬೇಕೆಂದು ಬಯಸಿದ್ದರೆ ಕೆಲವು ಟಿಪ್ಸ್‌ಗಳನ್ನು ಅನುಸರಿಸಿ. ಮ‌ೂರು ಕಾಲುಗಳ ಕಪ್ಪೆಯು ಸಂಪತ್ತಿನ ಬಲವಾದ ಸಂಕೇತವಾಗಿದ್ದು, ನಿಮ್ಮ ಮಲಗುವ ಕೋಣೆಯಲ್ಲಿ ಎಲ್ಲಾದರೂ ಇರಿಸಿ. ನಿಮ್ಮ ಕಚೇರಿಯಲ್ಲಿ ಗೋಡೆ ಬೆನ್ನಿಗಿರುವಂತೆ ಕುಳಿತುಕೊಳ್ಳಿ. ಆದರೆ ಕಿಟಕಿ ಅಥವಾ ತೆರೆದ ಪುಸ್ತಕದ ಶೆಲ್ಫ್ ಹಿಂಭಾಗದಲ್ಲಿರುವಂತೆ ಕುಳಿತುಕೊಳ್ಳಬೇಡಿ. ನೀವು ವಂಚನೆಗೆ ಗುರಿಯಾಗುವ ಸಂಭವವಿರುತ್ತದೆ.

ನಿಮ್ಮ ಹಿಂಭಾಗದ ಗೋಡೆಯಲ್ಲಿ ಪರ್ವತಶ್ರೇಣಿಯ ವರ್ಣಚಿತ್ರ ಅಥವಾ ಚಿತ್ರವನ್ನು ಇರಿಸಿ. ಬಾಗಿಲಿಗೆ ಬೆನ್ನುಮಾಡಿ ಕುಳಿತುಕೊಳ್ಳಲೇಬೇಡಿ. ಹರಿಯುವ ನೀರು ಸದಾ ಶುಭಕರ. ನಿಮ್ಮ ರಿಸೆಪ್ಶನ್ ಸ್ಥಳದಲ್ಲಿ ನೀರಿನ ಚಿಲುಮೆಯಿದ್ದರೆ, ನೀರು ಒಳಕ್ಕೆ ಬರುವಂತೆ ಖಾತರಿ ಮಾಡಿಕೊಳ್ಳಿ. ಹೊರಕ್ಕೆ ಹೋಗಲು ಅವಕಾಶ ಕೊಟ್ಟರೆ ನಿಮ್ಮ ಹಣವೂ ಕೂಡ ಹೊರಕ್ಕೆ ಸೋರಿಹೋಗಬಹುದು.ಬಿರುಸಾಗಿ ಹರಿಯುವ ನದಿಗೆ ಸಮೀಪದಲ್ಲಿ ವಾಸಿಸಬೇಡಿ. ಸಂಪತ್ತು ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಬಹುದು. ತೊರೆಗೆ ಸಮೀಪದಲ್ಲಿ ವಾಸಿಸುವುದು ಒಳ್ಳೆಯದು.

ವೆಬ್ದುನಿಯಾವನ್ನು ಓದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Show comments