Select Your Language

Notifications

webdunia
webdunia
webdunia
webdunia

ಮಾಸ್ಟರ್ಸ್ ಓಪನ್‌‌‌ : ಬೋಪಣ್ಣಾ , ಖುರೆಶೀ ಕ್ವಾರ್ಟರ್‌‌ ಫೈನಲ್‌‌‌ಗೆ ಪ್ರವೇಶ

ಮಾಸ್ಟರ್ಸ್ ಓಪನ್‌‌‌ : ಬೋಪಣ್ಣಾ , ಖುರೆಶೀ ಕ್ವಾರ್ಟರ್‌‌ ಫೈನಲ್‌‌‌ಗೆ ಪ್ರವೇಶ
, ಶುಕ್ರವಾರ, 18 ಏಪ್ರಿಲ್ 2014 (16:54 IST)
PR
ಎಟಿಪಿ ಮಾಸ್ಟರ್ಸ್‌‌‌ ಟೆನಿಸ್‌‌‌ ಟೂರ್ನೆಮೆಂಟ್‌‌ನಲ್ಲಿ ಭಾರತೀಯ ಡೆವಿಸ್‌ ಕಪ್‌ ಆಟಗಾರ ರೋಹನ್ ಬೋಪಣ್ಣ ಮತ್ತು ಇವರ ಸಹ ಆಟಗಾರ ಪಾಕಿಸ್ತಾನದ ಎಸಾಮ್‌ ಉಲ್‌‌ ಹಕ್‌ ಖುರೆಶೀ ಸುಲಭದಲ್ಲಿ ಗೆಲುವು ಸಾಧಿಸುವ ಮೂಲಕ ಕ್ವಾರ್ಟರ್‌ ಫೈನಲ್‌‌‌ಗೆ ಪ್ರವೇಶವನ್ನು ಪಡೆದಿದ್ದಾರೆ.

34,52,415 ಯೂರೋ ಮೊತ್ತದ ಈ ಟೂರ್ನಮೆಂಟ್‌‌ನಲ್ಲಿ ಬೋಪಣ್ಣ ಮತ್ತು ಖುರೆಶೀ ಜೋಡಿ ತಮ್ಮ ಎದುರಾಳಿಯಾದ ಪೊಲೆಂಡ್‌‌‌‌ನ ಲುಕಾಸ ಕುಬೊಟ್ ಮತ್ತು ಸ್ವಿಡನ್‌‌‌ ದೇಶದ ರಾಬರ್ಟ್‌‌‌‌ ಲಿಂಡಸಟೆಡ್ ಜೊಡಿಯನ್ನ 54 ನಿಮಿಷದಲ್ಲಿ 6-3, 6-0 ಅಂತರದಿಂದ ಸೋಲಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ಈ ಜೋಡಿ ಮುಂದಿನ ಪಂದ್ಯದಲ್ಲಿ ಕ್ರೊಯೆಶೀಯಾದ ಇವಾನ್ ಡೆಡಿಗ್‌ ಮತ್ತು ಬ್ರೆಜಿಲ್‌‌ನ ಮಾರ್ಸೆಲೋ ಮೆಲೊ ಜೋಡಿಯ ವಿರುದ್ದ ಸೆಣಸಾಡಲಿದ್ದಾರೆ. ಇವರು ಕಳೆದ ಪಂದ್ಯದಲ್ಲಿ ಜೆರೆಮಿ ಚಾರ್ಡಿ ಮತ್ತು ಜಾಯಿಲ್ಸ್‌‌‌ ಸಿಮೊನ್‌‌ನ ಪ್ರಾಂಚೈಸಿ ಜೋಡಿಯನ್ನು 6-2, 6-7,13-11 ಸೆಟ್‌‌‌ಗಳ ಅಂತರದಿಂದ ಸೋಲಿಸಿದ್ದರು.

Share this Story:

Follow Webdunia kannada