Select Your Language

Notifications

webdunia
webdunia
webdunia
webdunia

ಜುಡೋ ಚಾಂಪಿಯನ್‌‌‌‌ಶಿಪ್‌‌‌‌ : ಭಾರತಕ್ಕೆ 10 ಸ್ವರ್ಣ ಪದಕಗಳು

ಜುಡೋ ಚಾಂಪಿಯನ್‌‌‌‌ಶಿಪ್‌‌‌‌ : ಭಾರತಕ್ಕೆ 10 ಸ್ವರ್ಣ ಪದಕಗಳು
ನವದೆಹಲಿ , ಮಂಗಳವಾರ, 15 ಏಪ್ರಿಲ್ 2014 (16:35 IST)
PR
ಕಾಠ್ಮಂಡುವಿನಲ್ಲಿ ಎಪ್ರಿಲ್‌‌ 10 ರಿಂದ 13 ರವರೆಗೆ ನಡೆದ 7ನೇ ದಕ್ಷಿಣ ಏಷ್ಯಾ ಜುಡೋ ಚಾಂಪಿಯನ್‌‌‌‌ಶಿಪ್‌‌‌ನಲ್ಲಿ ಭಾರತದ ಒಟ್ಟು 12 ಆಟಗಾರರು ಭಾಗವಹಿಸಿದ್ದು ಇದರಲ್ಲಿ ಭಾರತದ ಜುಡೋ ಆಟಗಾರರಿಗೆ 10 ಸ್ವರ್ಣ , 1 ರಜತ ಮತ್ತು 1 ಕಂಚಿನ ಪದಕ ಲಭಿಸಿದೆ. .

ದಕ್ಷಿಣ ಏಷ್ಯಾದ ಜುಡೋ ಆಟದಲ್ಲಿ ಅಫಘಾನಿಸ್ತಾನ, ಬಾಂಗ್ಲಾದೇಶ, ಭಾರತ, ನೇಪಾಳ , ಪಾಕಿಸ್ತಾನ ಮತ್ತು ಶ್ರೀಲಂಕಾದ ಜುಡೋ ಆಟಗಾರರು ಭಾಗವಹಿಸಿದ್ದರು ಎಂದು ಭಾರತಿಯ ಜುಡೊ ಮಹಾಸಂಘ ತಿಳಿಸಿದೆ.

ಕಳೆದ ದಕ್ಷಿಣ ಏಷ್ಯಾ ಜುಡೋ ಚಾಂಪಿಯನ್‌‌‌ಶಿಪ್‌‌‌ ಪಾಕಿಸ್ತಾನದಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಕೂಡ ಭಾರತ 10 ಸ್ವರ್ಣ ಪದಕ ಮತ್ತು 1 ರಜತ ಪದಕ ಪಡೆದಿತ್ತು.

ಪ್ರಶಸ್ತಿ ಮುಡಿಗೇರಿಸಿಕೊಂಡವರು:

ಪುರುಷ: ನವಜೋತ್‌ ಚಾನಾ (60 ಕಿಗ್ರಾಂ), ಇರೊಮ್ ಸಂಜು ಸಿಂಗ್‌‌‌(66ಕಿಗ್ರಾಂ) , ನವದೀಪ್‌ ಚಾನಾ(73), ವಿಕೆಂದ್ರ ಸಿಂಗ್‌‌(81 ಕಿಗ್ರಾಂ) ಮತ್ತು ಅವತಾರ ಸಿಂಗ್‌‌ (90ಕಿಗ್ರಾಂ) ಸ್ವರ್ಣ ಪದಕ ಪಡೆದರೆ , ಯಾಯಿಮಾ ಸಿಂಗ್‌‌‌(100 ಕಿಗ್ರಾಂ) ರಜತ ಪದಕ ಪಡೆದಿದ್ದಾರೆ.

ಮಹಿಳಾ ವಿಭಾಗ: ಎಂಗೊಮ್‌ ಅಂಕಿತಾ ಚಾನೂ(52 ಕಿಂಗ್ರಾಂ) , ಸುಚಿಕಾ ತರಿಯಾಲ(57 ಕಿಗ್ರಾಂ), ಗರಿಮಾ ಚೌಧರಿ(63 ಕಿಗ್ರಾಂ), ಹುದ್ರೊಮ್‌‌ ಸುನಿಬಾಲಾ ದೇವಿ(70 ಕಿಗ್ರಾಂ) ಮತ್ತು ಚೌಧರಿ ಜಿನಾ ದೇವಿ(78ಕಿಗ್ರಾಂ)ನಲ್ಲಿ ಸ್ವರ್ಣ ಪದಕ ಪಡೆದಿದ್ದಾರೆ ಮತ್ತು ರಜನಿ ಬಾಲಾ (48ಕಿಗ್ರಾಂ)ನಲ್ಲಿ ಕಂಚಿನ ಪದಕ ಪಡೆದಿದ್ದಾರೆ.

Share this Story:

Follow Webdunia kannada