Select Your Language

Notifications

webdunia
webdunia
webdunia
webdunia

ನೆಹರೂ ಕಪ್ ತಯಾರಿ; ಮೂರು ವಾರಗಳ ತರಬೇತಿ ಶಿಬಿರ

ನೆಹರೂ ಕಪ್ ತಯಾರಿ; ಮೂರು ವಾರಗಳ ತರಬೇತಿ ಶಿಬಿರ
ಮುಂಬೈ , ಮಂಗಳವಾರ, 17 ಜುಲೈ 2012 (13:31 IST)
PTI
ಪ್ರತಿಷ್ಠಿತ ನೆಹರೂ ಕಪ್‌ಗಾಗಿ ಶ್ರೇಷ್ಠ ಸಿದ್ಧತೆಯನ್ನೇ ಕೈಗೊಳ್ಳುವ ನಿಟ್ಟಿನಲ್ಲಿ ಮೂರು ವಾರಗಳ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಫುಟ್ಬಾಲ್ ಸಂಸ್ಥೆ (ಎಐಎಫ್‌ಎಫ್) ಸ್ಪಷ್ಟಪಡಿಸಿದೆ.

ಇದರಿಂದ ಆಟಗಾರರ ಕೌಶಲ್ಯದ ಬಗ್ಗೆಯೂ ಅರಿತುಕೊಳ್ಳಲು ನೂತನ ಕೋಚ್ ವಿಮ್ ಕೋವರ್‌ಮ್ಯಾನ್ ಅವರಿಗೂ ಹೆಚ್ಚು ಸಹಕಾರಿಯಾಗಲಿದೆ ಎಂದು ಸಹ ಎಐಎಫ್‌ಎಫ್ ಪ್ರಧಾನ ಕಾರ್ಯದರ್ಶಿ ಆಗಿರುವ ಕುಶಾಲ್ ದಾಸ್ ಅಭಿಪ್ರಾಯಪಟ್ಟಿದ್ದಾರೆ.

ಎಲ್ಲ ತಂಡಗಳಿಗೂ ಆಟಗಾರರನ್ನು 21 ದಿನಗಳಿಗೆ ಮುಂಚಿತವಾಗಿ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ. ಎರಡು ವಾರಗಳ ಮೊದಲು ಆಟಗಾರರನ್ನು ರಿಲೀಸ್ ಮಾಡಲು ಕ್ಲಬ್ ಬಯಸಿತ್ತು. ಆದರೆ ವಿಮ್ ನೂತನ ಕೋಚ್ ಆಗಿರುವುದರಿಂದ ಆಟಗಾರರ ಬಲಾಬಲವನ್ನು ಅರಿತುಕೊಳ್ಳಬೇಕಾಗಿದೆ. ಈ ಬಗ್ಗೆ ಕ್ಲಬ್ ಜತೆ ಮಾತುಕತೆ ನಡೆಸಲಾಗುತ್ತಿದೆ ಎಂದು ಕೆಲವು ಐ-ಲೀಗ್ ಕ್ಲಬ್‌ಗಳ ವಿರೋಧಕ್ಕೆ ಪ್ರತಿಯಾಗಿ ದಾಸ್ ತಿಳಿಸಿದರು.

ತರಬೇತಿ ಶಿಬಿರವನ್ನು ದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಒಂದು ವೇಳೆ ಮಳೆ ಅಡ್ಡಿಪಡಿಸಿದ್ದಲ್ಲಿ ತರಬೇತಿಯನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದರು.

Share this Story:

Follow Webdunia kannada