Select Your Language

Notifications

webdunia
webdunia
webdunia
webdunia

ಐಟಿಎಫ್ ಓಪನ್: ಭಾಂಭ್ರಿ, ರಸ್ತೋಗಿ ಎರಡನೇ ಸುತ್ತಿಗೆ

ಐಟಿಎಫ್ ಓಪನ್: ಭಾಂಭ್ರಿ, ರಸ್ತೋಗಿ ಎರಡನೇ ಸುತ್ತಿಗೆ
ಪುಣೆ , ಶುಕ್ರವಾರ, 18 ನವೆಂಬರ್ 2011 (16:29 IST)
PTI
ಐಟಿಎಫ್ ಮೆನ್ಸ್ ಫ್ಯೂಚರ್ಸ್ ಟೆನಿಸ್ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಅಗ್ರಶ್ರೇಯಾಂಕಿತ ಆಟಗಾರ ಯೂಕಿ ಭಾಂಭ್ರಿ ಮತ್ತು ಕರಣ್ ರಸ್ತೋಗಿ ಹಾಗೂ ವಿಜಯಂತ್ ಮಲಿಕ್ ಮೊದಲ ಸುತ್ತಿನಲ್ಲಿ ಜಯಗಳಿಸಿ ಎರಡನೇ ಸುತ್ತಿಗೆ ತಲುಪಿದ್ದಾರೆ.

ಭಾಂಭ್ರಿ, ಮೊದಲ ಸುತ್ತಿನ ಪಂದ್ಯದಲ್ಲಿ ತಮ್ಮ ಜರ್ಮನಿಯ ಎದುರಾಳಿ ಜೇಮ್ಸ್ ಮರ್ಸಾಲೆಕ್ ವಿರುದ್ಧ 6-0, 4-1 ಸೆಟ್‌ಗಳಿಂದ ಜಯಗಳಿಸಿ ಎರಡನೇ ಹಂತವನ್ನು ತಲುಪಿದ್ದಾರೆ.

ರಸ್ತೋಗಿ ತಮ್ಮ ಎದುರಾಳಿ ಎನ್ ಶ್ರೀರಾಮಬಾಲಾಜಿ ವಿರುದ್ಧ 6-4, 6-7(1), 6-4 ಸೆಟ್‌ಗಳಿಂದ ಗೆಲುವು ಪಡೆದು ಮುನ್ನಡೆ ಸಾಧಿಸಿದ್ದಾರೆ.

9ನೇ ಪಂದ್ಯದ ಮೊದಲ ಸೆಟ್‌ ವಶಪಡಿಸಿಕೊಂಡಿದ್ದರಿಂದ ಗೆಲ್ಲಲು ಸುಲಭವಾಯಿತು ಎಂದು ಕರಣ್ ರಸ್ತೋಗಿ ಪಂದ್ಯದ ಗೆಲುವಿನ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.

Share this Story:

Follow Webdunia kannada